See also 2resort
1resort ರಿಸಾರ್ಟ್‍
ಅಕರ್ಮಕ ಕ್ರಿಯಾಪದ
  1. (ನೆರವಿಗಾಗಿ, ರಕ್ಷಣೆಗಾಗಿ, ವ್ಯಕ್ತಿಯನ್ನು, ವಸ್ತುವನ್ನು ಯಾ ವಿಧಾನವನ್ನು, ಉಪಾಯವನ್ನು) ಆಶ್ರಯಿಸು; ಅವಲಂಬಿಸು; ಮರೆಹೋಗು: resort to force ಬಲ (ಪ್ರಯೋಗ)ವನ್ನು ಆಶ್ರಯಿಸು. resort to experiment ಪ್ರಯೋಗವನ್ನು ಅವಲಂಬಿಸು. resort to a loan ಸಾಲವನ್ನು ಅವಲಂಬಿಸು.
  2. (ಮೇಲಿಂದ ಮೇಲೆ ಭಾರಿ ಸಂಖ್ಯೆಯಲ್ಲಿ ವ್ಯಕ್ತಿಯಲ್ಲಿಗೆ ಯಾ ಸ್ಥಳಕ್ಕೆ) ಬಂದು ಹೋಗುತ್ತಿರು; ಪ್ರವಾಸಮಾಡುತ್ತಿರು; ಭೇಟಿ ಮಾಡುತ್ತಿರು: visitors resorted to the shirne by the hundred ನೂರುಗಟ್ಟಲೆ ಜನರು ಆ ದೇವಾಲಯಕ್ಕೆ ಬಂದು ಹೋಗುತ್ತಿದ್ದರು. people resorted to him in large numbers ಭಾರೀ ಸಂಖ್ಯೆಯಲ್ಲಿ ಜನ ಅವನಲ್ಲಿಗೆ ಭೇಟಿಗೆ ಹೋಗುತ್ತಿದ್ದರು.