See also 1reproach
2reproach ರಿಪ್ರೋಚ್‍
ನಾಮವಾಚಕ
  1. (ಯಾವುದೇ ತಪ್ಪಿಗಾಗಿ ಮಾಡುವ) ಛೀಮಾರಿ; ತೆಗಳಿಕೆ; ದೂಷಣೆ; ಖಂಡನೆ; ನಿಂದೆ: the mute reproach in her eyes ಆಕೆಯ ಕಣ್ಣುಗಳು ಮಾಡುವ ಮೌನವಾದ ದೂಷಣೆ.
  2. ಕೆಟ್ಟ ಹೆಸರು; ಅಪಕೀರ್ತಿ; ಕಳಂಕ:
    1. ಅವಮಾನ ತರುವಂಥ ವ್ಯಕ್ತಿ ಯಾ ವಿಷಯ: he is a reproach to his family ಅವನು ತನ್ನ ಕುಲಕ್ಕೇ ಕಳಂಕವಾಗಿದ್ದಾನೆ. the state of these roads is a reproach to civilization ಈ ರಸ್ತೆಗಳ ಸ್ಥಿತಿ ನಾಗರಿಕತೆಗೇ ಒಂದು ಅಪಕೀರ್ತಿ.
    2. ಕಳಂಕದ, ಅಪಕೀರ್ತಿಯ, ಅವಮಾನದ–ಸ್ಥಿತಿ: live in reproach and ignominy ಅಪಕೀರ್ತಿ ಅಪಮಾನಗಳನ್ನು ಹೊತ್ತು ಬದುಕುತ್ತಿರು.
  3. (ಬಹುವಚನದಲ್ಲಿ) (ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍ ಚರ್ಚುಗಳಲ್ಲಿ ಗುಡ್‍ ಹ್ರೈಡೇ ದಿನ ಹಾಡುವ, ಯೇಸುಕ್ರಿಸ್ತನು ಆಗಿನ ಜನರ ಮೇಲೆ ಮಾಡಿದ ಖಂಡನೆಗಳನ್ನು ಸೂಚಿಸುವ) ಉತ್ತರ ಪ್ರತ್ಯುತ್ತರ ಗೀತೆಗಳು.
ಪದಗುಚ್ಛ
  1. above (or beyond reproach) ದೂಷಣೆಗೆ ಮೀರಿದ; ನಿರ್ದುಷ್ಟ; ನಿಷ್ಕಳಂಕ; ದೋಷಾತೀತ.
  2. term of reproach ಖಂಡನಾತ್ಮಕವಾದ ಶಬ್ದ, ಪದ.