See also 1relish
2relish ರೆಲಿಷ್‍
ಸಕರ್ಮಕ ಕ್ರಿಯಾಪದ
  1. (ಯಾವುದಕ್ಕೇ ಆಗಲಿ) ರುಚಿಕೊಡು; (ಯಾವುದನ್ನೇ) ರುಚಿಸುವಂತೆ ಮಾಡು.
  2. (ಯಾವುದನ್ನೇ ಆಗಲಿ) ಸವಿ; (ಯಾವುದೇ ಒಂದರ) ರುಚಿಯನ್ನು ಅನುಭವಿಸು.
  3. (ರೂಪಕವಾಗಿ) (ಯಾವುದೇ ಒಂದರ) ಸಿಹಿ ಯಾ ಕಹಿಯನ್ನು ಅನುಭವಿಸು; ಹಿತವಾದ ಯಾ ಅಹಿತವಾದ ಪರಿಣಾಮವನ್ನು ಅನುಭವಿಸು: he does not relish the prospect (ಆಗಲಿರುವ) ಪರಿಣಾಮ ಅವನಿಗೆ ಇಷ್ಟವಿಲ್ಲ; (ನಿರೀಕ್ಷಿತ ಅಹಿತ) ಪರಿಣಾಮ ಅವನಿಗೆ ರುಚಿಸುವುದಿಲ್ಲ.
ಅಕರ್ಮಕ ಕ್ರಿಯಾಪದ
  1. (ನಿರ್ದೇಶಿಸಿದ ರೀತಿಯ) ರುಚಿ, ವಾಸನೆ, ಛಾಯೆ, ಲಕ್ಷಣ ಮೊದಲಾದವನ್ನು ಹೊಂದಿರು, ಪಡೆದಿರು; (ನಿರ್ದೇಶಿಸಿದ) ರುಚಿಯುಳ್ಳದ್ದಾಗಿರು.
  2. ರುಚಿಸು; ರುಚಿಗೆ ಹಿತವಾಗಿರು (ರೂಪಕವಾಗಿ ಸಹ): it relishes not well ಅದು ರುಚಿಸುವುದಿಲ್ಲ, ರುಚಿಗೆ ಹಿತವಾಗಿಲ್ಲ.