See also 2relish
1relish ರೆಲಿಷ್‍
ನಾಮವಾಚಕ
  1. ಸವಿ; ರುಚಿ; ಯಾವುದೇ ವಸ್ತುವಿನ ವಿಶಿಷ್ಟ ಆಸ್ವಾದ.
  2. (ಯಾವುದೇ ಗುಣದ) ಛಾಯೆ; ಹೊಳಹು; ಮಿಂಚು.
  3. (ತಿನ್ನುವ, ಪಾನಮಾಡುವ ಬಯಕೆಯನ್ನು ತೀವ್ರಗೊಳಿಸುವ) ಕಂಪು; ಸವಿ; ಮಾಧುರ್ಯ; ರುಚಿ; ಪರಿಮಳ: food has no relish during illness ಕಾಯಿಲೆಯಲ್ಲಿ ಆಹಾರಕ್ಕೆ ರುಚಿಯೇ ಇರುವುದಿಲ್ಲ.
  4. ರೋಚಕ; ಆಹಾರಕ್ಕೆ ರುಚಿಕೊಡುವ ವಸ್ತು.
  5. ವ್ಯಂಜನ; ಆಹಾರದ ಜೊತೆಗೆ ರುಚಿಗಾಗಿ ನಂಜಿಕೊಳ್ಳುವ ವಸ್ತು, ಮುಖ್ಯವಾಗಿ ಉಪ್ಪಿನಕಾಯಿ, ಸಾಸ್‍ ಮೊದಲಾದವು.
  6. (ಆಹಾರ ಮೊದಲಾದ ವಸ್ತುಗಳ ರುಚಿಯನ್ನು) ಸವಿಯುವುದು; ಅನುಭವಿಸುವುದು; ಆಸ್ವಾದನೆ (ರೂಪಕವಾಗಿ ಸಹ).
  7. ಇಷ್ಟ; ಅಭಿರುಚಿ; ಆಸ್ವಾದ: he has no relish for poetry ಅವನಿಗೆ ಕಾವ್ಯದಲ್ಲಿ ಅಭಿರುಚಿ ಇಲ್ಲ.
  8. ರುಚಿ; ಕಟ್ಟಾಸೆ; ತೀವ್ರ ಬಯಕೆ: has no relish for travelling ಪ್ರಯಾಣವೆಂದರೆ ಅವನಿಗೆ ತೀವ್ರ ಬಯಕೆಯೇ ಇಲ್ಲ.
  9. ಆಕರ್ಷಣೆ; ಆಕರ್ಷಕ ಗುಣ: fishing loses its relish in winter ಚಳಿಗಾಲದಲ್ಲಿ ಮೀನುಗಾರಿಕೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ.