See also 1register
2register ರೆಜಿಸ್ಟರ್‍
ಸಕರ್ಮಕ ಕ್ರಿಯಾಪದ
  1. (ಹೆಸರು, ಘಟನೆ ಮೊದಲಾದವನ್ನು ವಿಹಿತರೂಪದಲ್ಲಿ) ದಾಖಲ್ಮಾಡಿಡು; ನೋಂದಾಯಿಸು.
  2. (ರೂಪಕವಾಗಿ) ಮನಸ್ಸಿನಲ್ಲಿ ಬರೆದಿಟ್ಟುಕೊ, ಗುರುತಿಟ್ಟುಕೊ.
  3. ದಾಖಲೆ ಪುಸ್ತಕದಲ್ಲಿ ಬರೆದಿಡು ಯಾ ಬರೆಸಿಡು; ನೋಂದಾಯಿಸು.
  4. (ಉಪಕರಣದ ವಿಷಯದಲ್ಲಿ) (ತಾಪ, ಒತ್ತಡ ಮೊದಲಾದವುಗಳ ಪ್ರಮಾಣದ ಅಂಕವನ್ನು) ಸೂಚಿಸು; ದಾಖಲೆಮಾಡು; ತೋರಿಸು.
  5. (ಚಲನಚಿತ್ರ) (ಭಾವವನ್ನು ಮುಖಮುದ್ರೆ, ಹಾವಭಾವಗಳಿಂದ) ಸೂಚಿಸು.
  6. (ಮುದ್ರಣ ಹಾಳೆಯ ಎರಡು ಪುಟಗಳಲ್ಲೂ) ಮುದ್ರಣ ಸಮತೆಯನ್ನು ಉಂಟುಮಾಡು.
  7. (ಕಾಗದ ಮೊದಲಾದವನ್ನು) ರಿಜಿಸ್ಟರ್ಡ್‍ ಅಂಚೆಯಲ್ಲಿ ಕಳಿಸಲು ಅಂಚೆ ಕಚೇರಿಗೆ ಕೊಡು.
ಅಕರ್ಮಕ ಕ್ರಿಯಾಪದ
  1. (ಭಾವನೆಯ ವಿಷಯದಲ್ಲಿ) ಒಬ್ಬನ ಮುಖಮುದ್ರೆಯಲ್ಲಿ ಯಾ ಸಂಜ್ಞೆಯಲ್ಲಿ ಪ್ರಕಟವಾಗು, ತೋರು: registered surprise ಆಶ್ಚರ್ಯ ತೋರಿದ.
  2. (ಒಬ್ಬ ವ್ಯಕ್ತಿಯ ಮನಸ್ಸಿನ ಮೇಲೆ) ಪ್ರಭಾವ ಒತ್ತು; ಪರಿಣಾಮ ಬೀರು: did not register at all ಮನಸ್ಸಿನ ಮೇಲೆ ಪ್ರಭಾವ ಬೀರಲೇ ಇಲ್ಲ, ದಾಖಲಾಗಲೇ ಇಲ್ಲ.
  3. ನೋಂದಣಿ ಪುಸ್ತಕದಲ್ಲಿ, ಮುಖ್ಯವಾಗಿ ಮತದಾನದ ಹಕ್ಕುಳ್ಳ ಮತದಾರನಾಗಿ ದಾಖಲ್ಮಾಡಿಕೊ ಯಾ ಹೋಟೆಲಿನ ಕೊಠಡಿಯಲ್ಲಿ ತಂಗಲು ನೋಂದಣಿ ಪುಸ್ತಕದಲ್ಲಿ ದಾಖಲು ಮಾಡಿಕೊ.
  4. (ಮುದ್ರಣ ಹಾಳೆಯ ಎರಡು ಪುಟಗಳಲ್ಲೂ) ಮುದ್ರಣ ಸಮತೆಯುಂಟಾಗು.
ಪದಗುಚ್ಛ

register a letter (ಅಂಚೆಯ ವಿಷಯದಲ್ಲಿ) (ಕಾಗದವನ್ನು ಸುರಕ್ಷಿತವಾಗಿ ಕಳುಹಿಸಲೋಸುಗ) ರೆಜಿಸ್ಟರ್‍ ಮಾಡು; ನೋಂದಣಿಮಾಡಿಸು.