See also 2register
1register ರೆಜಿಸ್ಟರ್‍
ನಾಮವಾಚಕ
  1. ರಿಜಿಸ್ಟರು; (ಆಧಾರವಾಗಿ ವಿವರಗಳನ್ನು ಬರೆದಿಡುವ) ದಾಖಲೆ ಪುಸ್ತಕ.
  2. (ಜನನ ಮರಣ, ಶವಸಂಸ್ಕಾರ, ಮದುವೆ, ಮತದಾರರು ಮೊದಲಾದವುಗಳ) ಆಧಿಕೃತ ದಾಖಲೆಪಟ್ಟಿ.
  3. (ಆರ್ಗನ್‍ ವಾದ್ಯದ ಕೊಳಲುಗಳನ್ನು ನಿಯಂತ್ರಿಸುವ) ಜಾರುಕೀಲು.
    1. ಶಾರೀರದ (ಆರೋಹಣ ಅವರೋಹಣಗಳ) ವ್ಯಾಪ್ತಿ; (ಗಾಯಕನ ದನಿಯ ಏರಿಳಿತದ) ಸ್ಥಾಯಿಶ್ರೇಣಿ.
    2. (ಶಾರೀರದ ಸಂಚಾರದಲ್ಲಿ) ಒಂದು ನಿರ್ದಿಷ್ಟ ಸ್ಥಾಯಿ.
  4. (ಬೆಂಕಿಯ ಗೂಡಿನ) ವಾಯುನಿಯಂತ್ರಕ; ಒಳನುಗ್ಗುವ ಗಾಳಿಯನ್ನು ಹೆಚ್ಚಿಸಲು ಯಾ ತಗ್ಗಿಸಲು, ಕಂಡಿಯನ್ನು ಹಿಗ್ಗಿಸುವ ಯಾ ಕುಗ್ಗಿಸುವ ಜಾರುತಗಡು.
  5. ರಿಜಿಸ್ಟರು; ವೇಗ, ಬಲ ಮೊದಲಾದವನ್ನು ದಾಖಲಿಸುವ ಸಾಧನ.
  6. (ಇಲೆಕ್ಟ್ರಾನಿಕ್‍ ಸಾಧನಗಳಲ್ಲಿ) (ಒಂದು ನಿರ್ದಿಷ್ಟ ಉದ್ದೇಶಕ್ಕೆ ಬಳಸುವ, ಶೇಖರಿಸಿದ ದತ್ತಾಂಶವನ್ನು ಶೀಘ್ರವಾಗಿ ಮರಳಿ ಪಡೆಯಬಹುದಾದ) ದತ್ತಾಂಶ ಶೇಖರಣೆಯಲ್ಲಿನ ಪ್ರದೇಶ.
  7. (ಮುದ್ರಣ) ಅಚ್ಚಿನ–ಹೊಂದಿಕೆ, ಹೊಂದಾಣಿಕೆ, ಅನುರೂಪತೆ; ಮುದ್ರಣಸಮತೆ; ಹಾಳೆಯ ಎರಡು ಪುಟಗಳಲ್ಲೂ ಮುದ್ರಿತ ಭಾಗವು ಚಾಚೂ ವ್ಯತ್ಯಾಸವಿಲ್ಲದೆ ಹೊಂದುವುದು.
  8. (ಮುದ್ರಣ ಮತ್ತು ಛಾಯಾಚಿತ್ರ) ವರ್ಣಸಮತೆ; ಮುದ್ರಿಸಿದ ಛಾಯಾಚಿತ್ರದಲ್ಲಿನ ಬಣ್ಣದ ಭಾಗಗಳ ಸ್ಥಾನಗಳು ಮೂಲದವಕ್ಕೆ ಸಮನಾಗಿರುವುದು, ಹೊಂದುವುದು.
  9. (ಭಾಷಾಶಾಸ್ತ್ರ) ಭಾಷಾ(ಪ್ರ)ಭೇದ; ನಿರ್ದಿಷ್ಟ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬಳಸಿದ ಭಾಷೆಯ (ಆಡುಮಾತು, ವಿಧ್ಯುಕ್ತ, ಔಪಚಾರಿಕ, ಸಾಹಿತ್ಯಕ, ಮೊದಲಾದ) ವಿವಿಧ ಪ್ರಭೇದಗಳಲ್ಲಿ ಒಂದು.
  10. = cash register.