See also 2refuse  3refuse
1refuse ರಿಹ್ಯೂಸ್‍
ಸಕರ್ಮಕ ಕ್ರಿಯಾಪದ

ನಿರಾಕರಿಸು:

  1. ತೆಗೆದುಕೊಳ್ಳಲು ಒಪ್ಪದಿರು; ಅಂಗೀಕರಿಸದಿರು: refuse the invitation ಆಹ್ವಾನವನ್ನು ಅಂಗೀಕರಿಸದಿರು ( ಅಕರ್ಮಕ ಕ್ರಿಯಾಪದ ಸಹ).
  2. ಕೊಡಲು ಒಪ್ಪದಿರು; ಇಲ್ಲವೆನ್ನು; ನಕಾರ ಎತ್ತು: refuse premission ಅನುಮತಿಕೊಡಲು ಒಪ್ಪದಿರು ( ಅಕರ್ಮಕ ಕ್ರಿಯಾಪದ ಸಹ).
  3. ಮಾಡಲು ಒಪ್ಪದಿರು; ಒಲ್ಲೆ ಎನ್ನು.
  4. (ಅನೇಕ ವೇಳೆ ಎರಡು ಕರ್ಮಪದಗಳೊಡನೆ) (ಒಬ್ಬ ವ್ಯಕ್ತಿಯು) ಮಾಡಿದ (ಕೋರಿಕೆಯನ್ನು) ಒಪ್ಪದಿರು, ಮಂಜೂರು ಮಾಡದಿರು: refused me a day off ಒಂದು ದಿವಸದ ರಜೆಯ ಕೋರಿಕೆಯನ್ನು ಒಪ್ಪಲಿಲ್ಲ, ನಿರಾಕರಿಸಿದ: refuse to discuss the subject ಆ ವಿಷಯವನ್ನು ಚರ್ಚಿಸಲು ಒಪ್ಪದಿರು.
  5. ಯಾರಿಗೇ ಮಣಿಯಲು ಒಪ್ಪದಿರು: refuse to submit ಮಣಿಯಲೊಲ್ಲೆ ಎನ್ನು, ಮಣಿಯಲು ನಿರಾಕರಿಸು ( ಅಕರ್ಮಕ ಕ್ರಿಯಾಪದ ಸಹ).
  6. (ಕುದುರೆಯ ವಿಷಯದಲ್ಲಿ) ತಡೆಯನ್ನು ಹಾರಲೊಲ್ಲೆ, ದಾಟಲೊಲ್ಲೆ ಎನ್ನು; ಕಣಿಹಾಕು: the horse refuses fence ಕುದುರೆಯು ಬೇಲಿಯನ್ನು ಹಾರಲು ನಿರಾಕರಿಸುತ್ತಿದೆ.
ಅಕರ್ಮಕ ಕ್ರಿಯಾಪದ
  1. ಒಪ್ಪದಿರು; ಒಲ್ಲೆನೆನ್ನು; ನಿರಾಕರಿಸು: he was requested to speak but he refused ಆತನನ್ನು ಭಾಷಣಮಾಡಲು ಕೋರಿದರು, ಆದರೆ ಆತ ನಿರಾಕರಿಸಿದ.
  2. (ಇಸ್ಪೀಟಾಟದ ವಿಷಯದಲ್ಲಿ) ಅಡಿ ತೋರಿಸಿದ ರಂಗಿನ ಎಲೆಗಳು ಬೀಳದಿರು.
ಪದಗುಚ್ಛ
  1. refuse one ಒಬ್ಬನ ಕೋರಿಕೆಯನ್ನು ಸಲ್ಲಿಸಲು ಒಪ್ಪದಿರು.
  2. to be refused (ತನ್ನ) ಕೋರಿಕೆಯು ನಿರಾಕೃತವಾಗು: I have never been refused ನನ್ನ ಕೋರಿಕೆಯು ಎಂದೂ ನಿರಾಕೃತವಾಗಿಲ್ಲ.