See also 1reflex
2reflex ರೀಹ್ಲೆಕ್ಸ್‍
ಗುಣವಾಚಕ
  1. ಹಿಮ್ಮುರಿಯ; ಮತ್ತೆ ಹಿಂದಕ್ಕೆ ಬಾಗಿದ.
  2. (ಬೆಳಕು ಮೊದಲಾದವುಗಳ ವಿಷಯದಲ್ಲಿ) ಪ್ರತಿಫಲಿತ; ಪ್ರತಿಫಲಿಸಿದ.
  3. (ಆಲೋಚನೆ ಮೊದಲಾದವುಗಳ ವಿಷಯದಲ್ಲಿ) ಅಂತರ್ಮುಖಿಯಾದ; (ತನ್ನ ವಿಚಾರ, ಕಾರ್ಯ ಮೊದಲಾದವುಗಳನ್ನು) ತಾನೇ ಪರೀಕ್ಷಿಸಿಕೊಳ್ಳುವ; ಆತ್ಮಪರೀಕ್ಷಕ.
  4. (ಫಲಿತಾಂಶ ಯಾ ಪ್ರಭಾವದ ವಿಷಯದಲ್ಲಿ) ಪ್ರತ್ಯಾವರ್ತಕ; ಪ್ರತಿಕ್ರಿಯಾರೂಪದ; ಕ್ರಿಯೆಗೆ ಕಾರಣವಾದ ವ್ಯಕ್ತಿಗೇ ಯಾ ಬೇರೆ ಮೂಲಕ್ಕೇ–ಹಿಂದಿರುಗುವ.
  5. (ಶರೀರ ವಿಜ್ಞಾನ) (ಕ್ರಿಯೆಯ ವಿಷಯದಲ್ಲಿ) ಅನುವರ್ತನದ; ಅಸಂಕಲ್ಪಿತ, ಅನುದ್ದಿಷ್ಟ, ಅನೈಚ್ಛಿಕ ಪ್ರತಿಕ್ರಿಯೆಯ; ಮನಸ್ಸಿನ ಸಹಾಯವಿಲ್ಲದೆ ಯಾವುದೇ ಬಾಹ್ಯ ಪ್ರಚೋದನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸುವ; ಉದಾಹರಣೆಗೆ ಸೀನುವುದು.
  6. (ಕೋನದ ವಿಷಯದಲ್ಲಿ) ಪರಾವರ್ತಿತ; $180^\circ$ ಗಿಂತ ಹೆಚ್ಚಾದ.
  7. (ಯಾವುದೇ ಪ್ರಚೋದನೆಗೆ) ಪ್ರತಿಕ್ರಿಯಾ ರೂಪದ.