See also 2reflex
1reflex ರೀಹ್ಲೆಕ್ಸ್‍
ನಾಮವಾಚಕ
  1. ಪ್ರತಿಫಲಿತವಾದ ಬೆಳಕು, ಬಣ್ಣ ಯಾ ಕೀರ್ತಿ: the fame of Greece was a reflex from the glory of Athens ಗ್ರೀಸಿನ ಕೀರ್ತಿಯು ಅಥೆನ್ಸಿನ ವೈಭವದಿಂದ ಪ್ರತಿಫಲಿತವಾದ ಕೀರ್ತಿ.
  2. (ವರ್ಣಚಿತ್ರಣ) (ಚಿತ್ರದ ಒಂದು ಭಾಗದ ಪ್ರಕಾಶ ಇನ್ನೊಂದು ಭಾಗದ ಮೇಲೆ ಪ್ರತಿಫಲಿತವಾದಂತೆ ಚಿತ್ರಿಸಿರುವ) ಪ್ರತಿಫಲಿತ ಪ್ರದೇಶ.
  3. (ಕನ್ನಡಿ ಮೊದಲಾದವುಗಳಲ್ಲಿ ಕಾಣುವ ಯಾವುದೇ ವಸ್ತುವಿನ) ಪ್ರತಿಬಿಂಬ; ಪ್ರತಿರೂಪ; ಪ್ರತಿಚ್ಛಾಯೆ.
  4. (ರೂಪಕವಾಗಿ) (ಯಾವುದೇ ವಸ್ತುವಿನ ಯಾ ವಿಷಯದ) ಪ್ರತಿಬಿಂಬ; ಪ್ರತಿರೂಪ: legislation should be a reflex of public opinion ಶಾಸನವು ಯಾ ಕಾನೂನು ಸಾರ್ವಜನಿಕ ಅಭಿಪ್ರಾಯದ ಪ್ರತಿಬಿಂಬವಾಗಿರಬೇಕು.
  5. (ಮನಶ್ಶಾಸ್ತ್ರ) ಪ್ರತಿವರ್ತನ; ಅನುವರ್ತನ; ಯಾವುದೇ ಬಾಹ್ಯಪ್ರಚೋದನೆಗೆ ಪ್ರತಿಕ್ರಿಯೆಯಾಗಿ ದೇಹದಲ್ಲಿ ಯಾ ಮನಸ್ಸಿನಲ್ಲಿ ಉಂಟಾಗುವ ಪರಿಣಾಮ: the doctor tested the patient’s reflexes ವೈದ್ಯರು ರೋಗಿಯ ಪ್ರತಿವರ್ತನಗಳನ್ನು ಪರೀಕ್ಷಿಸಿದರು.
  6. ಭಾಷೆಯ ಹಿಂದಿನ ಹಂತವೊಂದರಿಂದ ವ್ಯುತ್ಪನ್ನವಾದ ಪದ.