See also 1red
2red ರೆಡ್‍
ನಾಮವಾಚಕ
  1. ಕೆಂಪು; ಕೆಂಪುಬಣ್ಣ; ರಕ್ತವರ್ಣ.
  2. ಕೆಂಪಿನ ಯಾವುದೇ ಛಾಯೆ.
  3. (ರೂಲೆಟ್‍ ಮತ್ತು ರೂಜ್‍ ಆನ್ವಾರ್‍ ಎಂಬ ಜೂಜಾಟಗಳಲ್ಲಿ) ಕೆಂಪು ಮನೆ; ಕೆಂಪುಚೌಕ.
    1. ಆಟಗಳಲ್ಲಿ ಕೆಂಪು ಬಣ್ಣದ ಚೆಂಡು, ಬಿಲ್ಲೆ ಮೊದಲಾದವು.
    2. ಅಂಥ ಬಿಲ್ಲೆ ಮೊದಲಾದವನ್ನು ಬಳಸುವ ಆಟಗಾರ.
  4. (ಅಮೆರಿಕನ್‍ ಪ್ರಯೋಗ) (ಲೆಕ್ಕಾಚಾರದ ಖಾತೆಯಲ್ಲಿ) ವ್ಯಯದ, ಸಾಲದ ಖಾತೆ: he is in the red ಅವನು ಸಾಲದಲ್ಲಿ ಸಿಕ್ಕಿಕೊಂಡಿದ್ದಾನೆ.
  5. ಕೆಂಪು ಉಡುಪು ಯಾ ಬಟ್ಟೆ: dressed in red ಕೆಂಪುಡುಪು ಉಟ್ಟು.
  6. (ಹಿಂದೆ ಬ್ರಿಟಿಷ್‍ ನೌಕಾಸೇನೆಯ ಮೂರುಪಡೆಗಳಲ್ಲೊಂದಾಗಿದ್ದ) ಕೆಂಪು ನೌಕಾಪಡೆ.
  7. (ಆಡುಮಾತು) (ರಾಜನೀತಿ) ಉಗ್ರವಾದಿ ಯಾ ಗಣತಂತ್ರವಾದಿ ಯಾ ಅರಾಜಕತಾವಾದಿ ಯಾ ಸಮತಾವಾದಿ.
  8. ಕೆಂಪು ದೀಪ.