See also 2red
1red ರೆಡ್‍
ಗುಣವಾಚಕ
  1. ಕೆಂಪಾದ; ಕೆಂಬಣ್ಣದ; ಕೆಂಪು; ಕೆಚ್ಚನೆಯ; ಕೆಂಚನೆಯ; ರಕ್ತ: red as a rose ಗುಲಾಬಿಯಂತೆ ಕೆಂಪಾದ.
  2. (ಅವಮಾನ, ಕೋಪ ಮೊದಲಾದವುಗಳಿಂದ) ಮುಖ–ಕೆಂಪೇರಿದ, ಕೆಂಪಗಾದ; ಆರಕ್ತ.
  3. (ಕಣ್ಣುಗಳ ವಿಷಯದಲ್ಲಿ) ಕೆಂಪೇರಿದ; ಅತ್ತು ಕೆಂಪಗಾದ.
  4. (ಕೂದಲಿನ ವಿಷಯದಲ್ಲಿ) ಕೆಂಗಂದು ಬಣ್ಣದ.
  5. ನೆತ್ತರ ಕೋಡಿ ಹರಿದ; ರಕ್ತಮಯವಾದ: red battle ರಕ್ತಪಾತದ ಕಾಳಗ.
  6. ಸುಟ್ಟು ಬೂದಿಯಾದ; ಭಸ್ಮವಾದ: red ruin ಸುಟ್ಟು ಬೂದಿಯಾಗಿ ಹೋದದ್ದು.
  7. ಕ್ರಾಂತಿಕಾರಕ; ವಿಧ್ವಂಸಕ: a red anarchist ಕ್ರಾಂತಿಕಾರಕನಾದ ವಿಧ್ವಂಸಕ.
  8. ರಷ್ಯದ; ಸೋವಿಯೆಟ್‍ ಸಂಘದ: the Red Army ರಷ್ಯದ ಸೈನ್ಯ. the Red Air Force ಸೋವಿಯೆಟ್‍ ವಾಯುಸೇನೆ.
  9. (ಆಡುಮಾತು) ಕಮ್ಯೂನಿಸ್ಟ್‍ ಯಾ ಸಮಾಜವಾದದ.
  10. (ವೈನಿನ ವಿಷಯದಲ್ಲಿ) ಕೆಂಪು; ಕಪ್ಪು ದ್ರಾಕ್ಷಿಗಳಿಂದ ತಯಾರಿಸಿ ಅವುಗಳ ಸಿಪ್ಪೆಯ ಬಣ್ಣ ಹತ್ತಿದ.
ಪದಗುಚ್ಛ
  1. all-red (ಬ್ರಿಟಿಷ್‍ ಪ್ರಯೋಗ) ಕೆಂಪು ಬಣ್ಣದ ಪ್ರದೇಶದ: all-red route ಬ್ರಿಟಿಷ್‍ ಪಥ; ಪೂರ್ಣವಾಗಿ ಬ್ರಿಟಿಷ್‍ ಆಡಳಿತಕ್ಕೊಳಪಟ್ಟ ಪ್ರದೇಶದಲ್ಲಿ ಹಾದು ಹೋಗುವ ಹಾದಿ.
  2. red ant ಕೆಂಜಗ; ಕೆಂಪಿರುವೆ.
  3. red arsenic ಕೆಂಪು ಆರ್ಸೆನಿಕ್‍ ಪಾಷಾಣ.
  4. deep red ಕಡುಗೆಂಪಾದ.
  5. red eyes
    1. ರಕ್ತಾಕ್ಷಿಗಳು; ಕೆಂಗಣ್ಣುಗಳು; ರಕ್ತನೇತ್ರ.
    2. ಅತ್ತುಅತ್ತು ಕೆಂಪಾದ ಕಣ್ಣುಗಳು; ಆರಕ್ತನೇತ್ರಗಳು.
    3. (ಪಕ್ಷಿಗಳ ವಿಷಯದಲ್ಲಿ) ಕೆಂಪುಗುಡ್ಡೆಯ ಕಣ್ಣುಗಳು.
  6. fiery-red ಕೆಂಡದಂತೆ ಕೆಂಪಾದ.
  7. red gold (ಪ್ರಾಚೀನ ಪ್ರಯೋಗ ಮತ್ತು ಕಾವ್ಯಪ್ರಯೋಗ)
    1. ನಿಜವಾದ ಹೊನ್ನು; ಶುದ್ಧಚಿನ್ನ.
    2. ಧನ.
  8. red mullet ಕೆಂಪು ಮುಲೆಟ್‍ಮೀನು.
  9. red partridge ಕೆಂಪುಕವುಜಗ.
  10. red with anger ಕೋಪದಿಂದ ಕೆಂಪೇರಿದ.
  11. with red hands ರಕ್ತತೊಯ್ದ ಕೈಗಳಿಂದ; ರಕ್ತಸಿಕ್ತ ಹಸ್ತಗಳಿಂದ.