See also 1recruit
2recruit ರಿಕ್ರೂಟ್‍
ಸಕರ್ಮಕ ಕ್ರಿಯಾಪದ
    1. (ಸೈನ್ಯ, ಪಡೆ, ಹಡಗಿನ ಸಿಬ್ಬಂದಿ, ಸಂಘ, ಪಕ್ಷ ಮೊದಲಾದವಕ್ಕೆ) ಹೊಸಬನನ್ನು–ಸೇರಿಸಿಕೊ, ದಾಖಲು ಮಾಡಿಕೊ.
    2. ಹೊಸಬರನ್ನು ಸೇರಿಸಿಕೊಂಡು (ಸೈನ್ಯ ಮೊದಲಾದವನ್ನು) ರಚಿಸು.
  1. ಕೊರೆಯನ್ನು ತುಂಬಿಕೊ; ಸಾಲದೆ ಬಂದದ್ದನ್ನು ಸೇರಿಸಿಕೊ, ಒದಗಿಸಿಕೊ; ಕಡಮೆಯಾದಷ್ಟನ್ನು ಭರ್ತಿ ಮಾಡಿಕೊ.
  2. (ಸಂಖ್ಯೆ, ಮೊತ್ತ ಮೊದಲಾದವನ್ನು) ತುಂಬಿಕೊ; ಹೆಚ್ಚಿಸಿಕೊ.
  3. ಕುಂದುಕೊರತೆಗಳನ್ನು–ಸರಿಪಡಿಸಿಕೊ, ನಿವಾರಿಸಿಕೊ.
  4. ಸವೆತ ಕಳೆತಗಳನ್ನು ಸರಿಪಡಿಸಿಕೊ.
  5. ಹೊಸ ಚೈತನ್ಯ, ಶಕ್ತಿ–ಮೂಡಿಸಿಕೊ.
ಅಕರ್ಮಕ ಕ್ರಿಯಾಪದ
  1. ಹೊಸಬರನ್ನು, ಹೊಸ ಅಭ್ಯರ್ಥಿಗಳನ್ನು ಯಾ ಸದಸ್ಯರನ್ನು–ಹುಡುಕು ಯಾ ಪಡೆ.
  2. (ಪ್ರಾಚೀನ ಪ್ರಯೋಗ) ಆರೋಗ್ಯ ಮೊದಲಾದವನ್ನು ಪುನಃ ಪಡೆದುಕೊ; ಮತ್ತೆ ಸ್ವಾಸ್ಥ್ಯ ಹೊಂದು: he has gone to the country to recruit ಪುನಃ ಸ್ವಾಸ್ಥ್ಯಹೊಂದಲು ಅವನು ಹಳ್ಳಿಗಾಡಿಗೆ ಹೋಗಿದ್ದಾನೆ.