See also 1rate  3rate  4rate
2rate ರೇಟ್‍
ಸಕರ್ಮಕ ಕ್ರಿಯಾಪದ
  1. ಬೆಲೆಯನ್ನು, ಯೋಗ್ಯತೆಯನ್ನು – ಕಟ್ಟು, ನಿರ್ಣಯಿಸು, ಅಂದಾಜು ಮಾಡು: I do not rate his merits high ಅವನ ಗುಣಗಳಿಗೆ, ಅರ್ಹತೆಗಳಿಗೆ ನಾನೇನೂ ಹೆಚ್ಚು ಬೆಲೆ ಕಟ್ಟುವುದಿಲ್ಲ.
  2. (ಕೃತಿ, ಕೆಲಸ, ಯಂತ್ರದ ಸಾಮರ್ಥ್ಯ ಮೊದಲಾದವುಗಳಿಗೆ) ಬೆಲೆ ನಿರ್ಧರಿಸು; ಬೆಲೆ ಕಟ್ಟು.
  3. (ಚಲಾವಣೆಯ ಮಾನಕ್ಕೆ ತಕ್ಕಂತೆ ನಾಣ್ಯದ) ಬೆಲೆಯನ್ನು ನಿಗದಿಮಾಡು: copper coinage is rated much above its real value ತಾಮ್ರದ ನಾಣ್ಯಗಳಿಗೆ ನಿಜವಾದ ಬೆಲೆಗಿಂತ ತೀರ ಹೆಚ್ಚು ಬೆಲೆಯನ್ನು ನಿಗದಿಮಾಡಲಾಗಿದೆ.
  4. ಭಾವಿಸು; ಪರಿಗಣಿಸು; ಎಣಿಸು: I rated him among my benefactors ನನ್ನ ಉಪಕಾರಿಗಳಲ್ಲಿ ಆತನೂ ಒಬ್ಬನೆಂದು ನಾನು ಎಣಿಸಿದೆ.
  5. ಅರ್ಹವಾಗಿರು; ಯೋಗ್ಯತೆ ಹೊಂದಿರು.
  6. (ಬ್ರಿಟಿಷ್‍ ಪ್ರಯೋಗ) (ಸಾಮಾನ್ಯವಾಗಿ ಕರ್ಮಣಿ ಪ್ರಯೋಗ)
    1. ಸ್ಥಳೀಯ ಕಂದಾಯ ವಿಧಿಸು; ಸ್ಥಳೀಯ ತೆರಿಗೆಗೆ ಈಡುಮಾಡು: houses are rated at a sum not much less than the rent ಮನೆಗಳಿಗೆ ಅವುಗಳ ಬಾಡಿಗೆಗಿಂತ ಹೆಚ್ಚೇನೂ ಕಡಿಮೆಯಿಲ್ಲದಂತೆ ಸ್ಥಳೀಯ ಕಂದಾಯ ವಿಧಿಸಿದೆ.
    2. ಸ್ಥಳೀಯ ತೆರಿಗೆ ಹಾಕಲು ಆಸ್ತಿಯ ಬೆಲೆ – ಕಟ್ಟು, ಅಂದಾಜು ಮಾಡು.
  7. (ನೌಕಾಯಾನ) ಗೊತ್ತಾದ ದರ್ಜೆಗೆ ಸೇರಿಸು.
ಅಕರ್ಮಕ ಕ್ರಿಯಾಪದ

ನಿರ್ದಿಷ್ಟ ದರ್ಜೆಯದ್ದಾಗಿರು ಯಾ ದರ್ಜೆಯದೆಂದು ಪರಿಗಣಿತವಾಗಿರು.

ಪದಗುಚ್ಛ

rate up (ವಿಶೇಷ ರೀತಿಯ ಅಪಾಯಕ್ಕೆ ಒಳಗಾಗಬಹುದಾದವರ ಮೇಲೆ) ಹೆಚ್ಚಿನ ವಿಮೆಯ ದರವನ್ನು ವಿಧಿಸು, ನಿಗದಿಮಾಡು; ವಿಮಾದರ ಏರಿಸು.