See also 2rate  3rate  4rate
1rate ರೇಟ್‍
ನಾಮವಾಚಕ
  1. ದರ; ಸರಕುಗಳ ಧಾರಣೆ, ವಿನಿಮಯ, ತೆರಿಗೆ ಯಾ ಸುಂಕ, ಬಡ್ಡಿ ಯಾ ವೇತನ, ವೇಗ ಮೊದಲಾದವುಗಳ ಪರಸ್ಪರ ಪ್ರಮಾಣ: at the rate of a rupee a dozen ಡಜನ್ನಿಗೆ ಒಂದು ರೂಪಾಯಿ ದರದಲ್ಲಿ, ರೂಪಾಯಿನಂತೆ. entertainment tax at the rate of five paise per rupee ರೂಪಾಯಿಗೆ ಐದು ಪೈಸೆಯ ದರದಲ್ಲಿ ಮನರಂಜನೆ ತೆರಿಗೆ. rate of interest ಬಡ್ಡಿಯ ದರ. rate of wages ವೇತನ ದರ.
  2. ದರ; ಬೆಲೆ; ನಿಗದಿತ ಯಾ ಸೂಕ್ತ ಬೆಲೆ, ವೆಚ್ಚ ಯಾ ಮೂಲ್ಯ: postal rate ಅಂಚೆವೆಚ್ಚ. rate for the job ಕೆಲಸಕ್ಕೆ ಕೂಲಿ. high rate ದುಬಾರಿ ಬೆಲೆ. low rate ಕಡಮೆ ಬೆಲೆ.
  3. (ಬ್ರಿಟಿಷ್‍ ಪ್ರಯೋಗ)
    1. (ಸ್ಥಳೀಯ ಉದ್ದೇಶಗಳಿಗಾಗಿ ಸ್ಥಳೀಯ ಸಂಸ್ಥೆಗಳು ವಿಧಿಸುವ) ಕಂದಾಯ; ತೆರಿಗೆ.
    2. (ಬಹುವಚನದಲ್ಲಿ) ಕಂದಾಯ ಹಣ; ತೆರಿಗೆ ಹಣ: rates and taxes ಸ್ಥಳೀಯ ಕಂದಾಯಗಳು ಹಾಗೂ ತೆರಿಗೆಗಳು.
  4. ದರ್ಜೆ: first rate ಪ್ರಥಮ ದರ್ಜೆ.
  5. ಚಲನೆಯ ಯಾ ಬದಲಾವಣೆಯ ತೀವ್ರತೆ, ವೇಗ: travelling at a great rate ಭಾರಿ ವೇಗದಲ್ಲಿ ಪಯಣಿಸುತ್ತಾ.
ಪದಗುಚ್ಛ
  1. at a fearful rate ಭಯಂಕರ ಗತಿಯಲ್ಲಿ, ವೇಗದಲ್ಲಿ.
  2. at a high or great rate ಭಾರಿವೇಗದಲ್ಲಿ.
  3. at any rate ಹೇಗೆಯೇ ಆದರೂ; ಏನೇ ಆಗಲಿ; ಅಂತೂ.
  4. at that rate ಹಾಗಿದ್ದ – ಪಕ್ಷದಲ್ಲಿ, ಪಕ್ಷಕ್ಕೆ; ಅಂಥ ಪರಿಸ್ಥಿತಿಯಲ್ಲಿ; ಅದು ನಿಜವಾಗಿದ್ದರೆ; ಸಂದರ್ಭ ಹಾಗಿದ್ದರೆ.
  5. at this rate ಹೀಗಿದ್ದ ಪಕ್ಷದಲ್ಲಿ, ಪಕ್ಷಕ್ಕೆ; ಇಂಥ ಪರಿಸ್ಥಿತಿಯಲ್ಲಿ; ಇದು ನಿಜವಾಗಿದ್ದರೆ; ಸಂದರ್ಭ ಹೀಗಿದ್ದರೆ.