See also 2rat
1rat ರ್ಯಾಟ್‍
ನಾಮವಾಚಕ
    1. ಇಲಿ; ಮೂಷಕ.
    2. ಅಂಥದೇ ದಂಶಕ: water-rat ನೀರಿಲಿ; ಜಲಮೂಷಿಕ.
  1. (ಬಹುವಚನದಲ್ಲಿ) (ಅಶಿಷ್ಟ) ತಿರಸ್ಕಾರ, ಕಿರಿಕಿರಿ ಮೊದಲಾದವನ್ನು ಸೂಚಿಸುವ ಉದ್ಗಾರ.
  2. (ರಾಜನೀತಿಶಾಸ್ತ್ರ) (ಪಾಳುಮನೆಯನ್ನೋ ಮುಳುಗುತ್ತಿರುವ ಹಡಗನ್ನೋ ಇಲಿಗಳು ತೊರೆದು ಓಡುವಂತೆ ಸ್ವಪಕ್ಷವನ್ನು ಕಷ್ಟಕಾಲದಲ್ಲಿ ತೊರೆದು ಹೋಗುವ) ಪಕ್ಷತ್ಯಾಗಿ; ಪಕ್ಷಾಂತರಿ; ಪಕ್ಷಾಂತರ ಮಾಡುವ ರಾಜಕಾರಣಿ.
  3. (ಕಾರ್ಮಿಕ ಸಂಘದ ಪರವಾಗಿ ಮುಷ್ಕರಕ್ಕೆ ಸೇರಲೊಲ್ಲದ, ಮುಷ್ಕರಕಾರನ ಬದಲು ಕೆಲಸ ಮಾಡಲೊಪ್ಪುವ, ಕಾರ್ಮಿಕ ಸಂಘದ ಬೇಡಿಕೆಗಿಂತ ಕಡಿಮೆ ವೇತನಕ್ಕಾಗಿ ದುಡಿಯುವ) ಕಾರ್ಮಿಕ ದ್ರೋಹಿ.
  4. (ಆಡುಮಾತು) ಅಹಿತಕರ ವ್ಯಕ್ತಿ.
ಪದಗುಚ್ಛ
  1. like a drowned rat ಒದ್ದೆ ಮುದ್ದೆಯಾದ.
  2. smell a rat ಮೋಸ ಮೊದಲಾದವನ್ನು ಶಂಕಿಸು; ಅವುಗಳ ವಿಷಯವಾಗಿ ಸಂದೇಹ, ಗುಮಾನಿ ಪಡು.