See also 1rap  3rap  4rap
2rap ರ್ಯಾಪ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rapped; ವರ್ತಮಾನ ಕೃದಂತ rapping).
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಒಬ್ಬನ ಬೆರಳುಗಳ ಗೆಣ್ಣುಗಳನ್ನು, ಚುರುಕಾಗಿ) ಕುಟ್ಟು; ಹೊಡೆ.
  2. (ಬಾಗಿಲು, ಮೇಜು ಮೊದಲಾದವನ್ನು) ಬಡಿ; ತಟ್ಟು; ಕುಟ್ಟು ( ಅಕರ್ಮಕ ಕ್ರಿಯಾಪದ ಸಹ): rap at the door ಬಾಗಿಲು ತಟ್ಟು. rapped on the table ಮೇಜಿನ ಮೇಲೆ ಕುಟ್ಟಿದ.
  3. ತೀವ್ರವಾಗಿ ಖಂಡಿಸು, ಟೀಕಿಸು.
ಪದಗುಚ್ಛ

rap out

  1. (ಶಾಪೋಕ್ತಿ, ಶ್ಲೇಷೆ, ವ್ಯಂಗ್ಯೋಕ್ತಿ ಮೊದಲಾದವನ್ನು) ತಟಕ್ಕನೆ ಅಂದು ಬಿಡು; ಹಿಂದುಮುಂದೆ ನೋಡದೆ ಆಡಿಬಿಡು; ಆ ಕ್ಷಣವೇ ಹೇಳಿಬಿಡು, ನುಡಿದುಬಿಡು; ಬಾರಿಸಿಬಿಡು.
  2. ಬಿರುನುಡಿಯನ್ನಾಡು; ತೀಕ್ಷ್ಣವಾದ ಶಬ್ದಗಳನ್ನು ಪ್ರಯೋಗಿಸು.
  3. (ಪ್ರೇತಗಳ ವಿಷಯದಲ್ಲಿ, ಅವು ಮೈಮೇಲೆ ಬಂದಿರುವ ವ್ಯಕ್ತಿಯ ಯಾ ಮಾಧ್ಯಮದ ಮೂಲಕ ವಿಷಯ, ಸಂದೇಶ ಮೊದಲಾದವನ್ನು) ಒಮ್ಮಿಂದೊಮ್ಮೆ ಒದರುತ್ತಿರು.