See also 2rap  3rap  4rap
1rap ರ್ಯಾಪ್‍
ನಾಮವಾಚಕ
  1. ತಟ್ಟು; ಕುಟ್ಟು: a rap on the knuckles (ಮಕ್ಕಳಿಗೆ ದಂಡನೆಯ ರೂಪದಲ್ಲಿ ಕೊಟ್ಟ) ಬೆರಳುಗಳ ಗೆಣ್ಣುಗಳ ಮೇಲೆ ಕುಟ್ಟಿದ ಕುಟ್ಟು.
  2. (ಅಶಿಷ್ಟ)
    1. ಛೀಮಾರಿ; ಆಕ್ಷೇಪ; ನಿಂದೆ.
    2. ದಂಡನೆ; ಶಿಕ್ಷೆ: take the rap (ಹಲವೊಮ್ಮೆ ಬೇರೊಬ್ಬರಿಗಾಗಿ) ಛೀಮಾರಿ ಹಾಕಿಸಿಕೊ, ಶಿಕ್ಷೆ ಅನುಭವಿಸು.
  3. (ಬಾಗಿಲು ತಟ್ಟುವವನು ಮಾಡಿದ) ತಟ್ಟುವ ಸದ್ದು; ಬಾಗಿಲ ಬಡಿತ.
  4. (ಪ್ರೇತಾವೇಶ ಪ್ರದರ್ಶನಗಳಲ್ಲಿ ಪ್ರೇತಾವಾಹನೆಯಾಗಿರುವ ವ್ಯಕ್ತಿಯು ಮೇಜದ ಯಾ ನೆಲದ ಮೇಲೆ ಮಾಡಿದ) ತಟ್ಟು; ಕುಟ್ಟು; ಬಡಿತ.
  5. (ಅಶಿಷ್ಟ) ಸಂಭಾಷಣೆ.
    1. (ಮೊದಲೇ ಮುದ್ರಿಸಿದ ಸಂಗೀತಕ್ಕೆ ಅನುಸಾರ) ಒಬ್ಬನೇ ಲಯಬದ್ಧವಾಗಿ ಪಠಿಸಿದ, ವಾಚಿಸಿದ ಪ್ರಾಸಬದ್ಧ ಭಾಷಣ.
    2. ಸ್ಪಷ್ಟತಾಳಗಳಿಂದ ಕೂಡಿದ್ದು, ಪದಗಳನ್ನು ಹಾಡುವುದಕ್ಕಿಂತಲೂ ಹೆಚ್ಚಾಗಿ ಪಠಿಸುವ ಒಂದು ಬಗೆಯ ರಾಕ್‍ ಸಂಗೀತ.
ಪದಗುಚ್ಛ
  1. a rap on (or over) the knuckles (ರೂಪಕವಾಗಿ) ಛೀಮಾರಿ; ತೀವ್ರನಿಂದೆ.
  2. beat the rap (ಅಮೆರಿಕನ್‍ ಪ್ರಯೋಗ) ಶಿಕ್ಷೆತಪ್ಪಿಸಿಕೊ.
  3. take the rap ಪರಿಣಾಮ ಅನುಭವಿಸು.