See also 1range
2range ರೇಂಜ್‍
ನಾಮವಾಚಕ
  1. (ಮುಖ್ಯವಾಗಿ ಕಟ್ಟಡಗಳ ಯಾ ಬೆಟ್ಟಗಳ) ಸಾಲು; ಶ್ರೇಣಿ; ಪಂಕ್ತಿ.
  2. (ಯಾವುದೇ ಆಗಲಿ, ಇರುವ ಯಾ ಹಬ್ಬಿರುವ) ನೆಲೆ ಯಾ ದಿಕ್ಕು: the range of these strata is east and west ಈ ಸ್ತರಗಳು ಹಬ್ಬಿರುವುದು ಪೂರ್ವಪಶ್ಚಿಮವಾಗಿ. keep the two buoys in range with the lighthouse ಆ ತೇಲುವೆಗಳೆರಡನ್ನೂ ಬೆಳಕಿನ ಮನೆಯ ದಿಕ್ಕಿಗೆ ಎದುರಾಗಿರಿಸು.
    1. ಹುಲ್ಲುಗಾವಲು.
    2. ಬೇಟೆಯ ಪ್ರದೇಶ, ನಾಡು; ಮೃಗಯಾಕ್ಷೇತ್ರ.
  3. (ಬಂದೂಕಿನ ಅಭ್ಯಾಸಕ್ಕಾಗಿ ನಿರ್ಮಿಸಿರುವ) ಗುರಿಬಯಲು; ಗುರಿ ಹಲಗೆಗಳಿರುವ ಮೈದಾನ.
  4. (ಸಸ್ಯ ಮೊದಲಾದವು ಇರುವ, ಬೆಳೆದಿರುವ, ಹರಡಿರುವ ಯಾ ದೊರೆಯುವ) ನಾಡು; ಸೀಮೆ; ಪ್ರಾಂತ; ಪ್ರದೇಶ: this book gives the range of all the species of the plant ಆ ಗಿಡದ ಜಾತಿಗಳೆಲ್ಲ ಇರುವ ಪ್ರದೇಶವನ್ನೂ ಈ ಪುಸ್ತಕ ಹೇಳುತ್ತದೆ.
  5. (ಯಾವುದನ್ನೇ ಒಳಗೊಂಡ ಯಾ ಯಾವುದಕ್ಕೇ ಆಗಲಿ ಸಂಬಂಧಿಸಿದ) ಹರವು; ಕ್ಷೇತ್ರ; ಪರಿಮಿತಿ; ಎಲ್ಲೆಕಟ್ಟು; ವ್ಯಾಪ್ತಿ: this is the thorniest question in the whole range of policies ರಾಜನೀತಿಯ ಇಡೀ ವ್ಯಾಪ್ತಿಯಲ್ಲೇ ಅತ್ಯಂತ ತೊಡಕಿನ ಪ್ರಶ್ನೆ ಇದು. his reading is of very wide range ಅವನ ಓದಿನ ವ್ಯಾಪ್ತಿ ಬಹು ದೊಡ್ಡದು. Hebrew is out of my range ಹೀಬ್ರೂ ಭಾಷೆ ನನ್ನ ಕ್ಷೇತ್ರದಿಂದಾಚೆಯದು.
  6. (ಯಾವುದರದೇ ವ್ಯಾಪ್ತಿಯ) ಪರಿಮಿತಿಗಳು; ಎಲ್ಲೆಕಟ್ಟುಗಳು; ಮೇರೆಗಳು.
  7. (ಶಾರೀರದ ಯಾ ವಾದ್ಯಗಳು ನುಡಿಯುವ) ವ್ಯಾಪ್ತಿ; ವಿಸ್ತಾರ; ಏರಿಳಿತಗಳ ಅಂತರ: the range of her voice is astonishing ಆಕೆಯ ಶಾರೀರದ ವ್ಯಾಪ್ತಿ ವಿಸ್ಮಯಕರವಾದದ್ದು.
  8. (ಬೆಲೆಗಳು ಮೊದಲಾದವುಗಳ ಏರಿಳಿತಗಳ) ಅಂತರ; ಏರಿಕೆಯ ಪರಮಾವಧಿ ಮಟ್ಟ: there is a lower range of prices to-day ಇಂದು ಬೆಲೆಗಳ ಏರಿಕೆಯ ಮಟ್ಟ ಕಡಿಮೆಯಾಗಿದೆ. the range of the barometer readings is about $2”$ ವಾಯುಭಾರಮಾಪಕದ ಸೂಚ್ಯಂಕಗಳ ಅಂತರ ಸುಮಾರು 2 ಅಂಗುಲ.
  9. (ಯಾವುದೇ ಪರಿಮಿತಿಗಳ ನಡುವಣ)
    1. ಸಂಖ್ಯಾಶ್ರೇಣಿ.
    2. ಸ್ವರಶ್ರೇಣಿ.
  10. ಹಾರುದೂರ; ಕ್ಷೇಪಣ ದೂರ; (ಫಿರಂಗಿ ಯಾ ಬಂದೂಕಿಗೆ ಇರುವ) ಗುಂಡು ಹಾರಿಸುವ ದೂರ; (ಫಿರಂಗಿಗೆ ಮೊದಲಾದವುಗಳ) ಪ್ರಯೋಗವ್ಯಾಪ್ತಿ: the enemies are out of range of our cannon ಶತ್ರುಗಳು ನಮ್ಮ ಫಿರಂಗಿಗಳ ವ್ಯಾಪ್ತಿಯಿಂದಾಚೆ ಇದ್ದಾರೆ.
  11. (ಸಾಮಾನ್ಯವಾಗಿ ಒಲೆಗಳು, ಬಾಣಲೆಗಳು ಇರುವ ಮತ್ತು ದಬರಿ ಮೊದಲಾದವನ್ನು ಇಡಲು ಬಳಸುವ) ಅಡಿಗೆಯ ಒಲೆಗೂಡು.
  12. (ಅಮೆರಿಕನ್‍ ಪ್ರಯೋಗ) ವಿದ್ಯುತ್ತಿನ ಯಾ ಅನಿಲದ ಕುಕ್ಕರು.
  13. ಯಾನದೂರ; ಚಲನದೂರ; ಮತ್ತೆ ಇಂಧನ ತುಂಬಿಸಿಕೊಳ್ಳದೆ ಒಂದು ವಾಹನ ಯಾ ವಿಮಾನ ಎಷ್ಟು ದೂರ ಹೋಗ ಬಲ್ಲುದೋ ಆ ದೂರ.
  14. ಕ್ಯಾಮರಾ ವ್ಯಾಪ್ತಿ; ಕ್ಯಾಮಾರಾವಿಗೂ ಛಾಯಾಚಿತ್ರ ತೆಗೆಯಬೇಕಾದ ವಸ್ತುವಿಗೂ ಇರುವ ದೂರ.
  15. ಮುನ್ಸೂಚನೆ ವ್ಯಾಪ್ತಿ; ಮುನ್ಸೂಚನೆ ಮೊದಲಾದವುಗಳು ಸೂಚಿಸುವ ಕಾಲವ್ಯಾಪ್ತಿ.