See also 2range
1range ರೇಂಜ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಕರ್ಮಣಿ ಯಾ ಆತ್ಮಾರ್ಥಕ ಪ್ರಯೋಗ)
    1. (ಸೇನೆ ಮೊದಲಾದವುಗಳ ವಿಷಯದಲ್ಲಿ) ಸಾಲಾಗಿ, ಪಂಕ್ತಿಯಲ್ಲಿ, ಸಾಲುಸಾಲಾಗಿ – ನಿಲ್ಲಿಸು; ವ್ಯೂಹವಾಗಿ ಜೋಡಿಸು: ranged their troops ತಮ್ಮ ಪಡೆಗಳನ್ನು ಸಾಲುಸಾಲಾಗಿ ನಿಲ್ಲಿಸಿದರು.
    2. (ತಮ್ಮನ್ನು ತಾವೇ) ಸಾಲಾಗಿ ನಿಲ್ಲಿಸಿಕೊಳ್ಳು, ಜೋಡಿಸಿಕೊಳ್ಳು; ಸಾಲಾಗಿ ನಿಂತುಕೊಳ್ಳು, ಸೇರಿಕೊಳ್ಳು: ranged themselves on each side ಒಂದೊಂದು ಪಕ್ಕದಲ್ಲೂ ಸಾಲಾಗಿ ನಿಂತುಕೊಂಡರು.
    3. (ತಮ್ಮನ್ನು ತಾವೇ) ಹಂತಹಂತವಾಗಿ ಜೋಡಿಸಿಕೊಳ್ಳು; ಸೇರಿಕೊಂಡು ನಿಲ್ಲು; ಸೇರಿಕೊಂಡಿರು: trees ranged tier on tier ಹಂತದ ಮೇಲೆ ಹಂತವಾಗಿ ಸೇರಿಕೊಂಡು ಬೆಳೆದಿರುವ ಮರಗಳು.
    4. (ಒಬ್ಬನ ಜೊತೆಗೆ, ಕಡೆ ಯಾ ಎದುರಾಗಿ, ಯಾ ಒಂದು ಪಕ್ಷದ ಜೊತೆಗೆ, ಕಡೆ, ನಡುವೆ, ಯಾ ಎದುರಾಗಿ, ತನ್ನನ್ನು ತಾನೇ) ಸೇರಿಸಿಕೊ; ಸೇರಿಕೊ: he was ranged with (on the side of, among, against) the party ಅವನು ಆ ಪಕ್ಷದ ಕಡೆಗೆ, ಜೊತೆಗೆ, ನಡುವೆ, ಎದುರಾಗಿ – ಸೇರಿಕೊಂಡ.
  2. (ಫಿರಂಗಿಯ ಯಾ ತುಪಾಕಿಯ ವಿಷಯದಲ್ಲಿ) ಕ್ಷಿಪಣಿಯನ್ನು, ಗುಂಡನ್ನು ಹಾರಿಸು.
  3. ಎಲ್ಲಾ ದಿಕ್ಕುಗಳಲ್ಲೂ – ಓಡಾಡು, ಅಡ್ಡಾಡು, ಸುತ್ತಾಡು, ಸಂಚರಿಸು: ranging the woods ದಟ್ಟಡವಿಯಲ್ಲಿ ಸಂಚರಿಸುತ್ತಾ.
  4. (ಮುದ್ರಣ) (ಬ್ರಿಟಿಷ್‍ ಪ್ರಯೋಗ) (ಸಾಲುಗಳ, ಪಂಕ್ತಿಗಳ ತುದಿಗಳಲ್ಲಿ ಮುದ್ರಣದ ಮೊಳೆಗಳನ್ನು) ಸಮತಲವಾಗಿಸು; ಸಮತಲದಲ್ಲಿರುವಂತೆ ಮಾಡು; ಸಮನಾಗಿಸು.
ಅಕರ್ಮಕ ಕ್ರಿಯಾಪದ
  1. (ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ) ಸಾಲಾಗಿ ಹರಡಿರು; ಶ್ರೇಣಿಯಾಗಿ ಹಬ್ಬಿರು; ಉದ್ದಕ್ಕೂ ಇರು: the mountain chain ranges north and south ಪರ್ವತಶ್ರೇಣಿಯು ಉತ್ತರದಕ್ಷಿಣವಾಗಿ ಹಬ್ಬಿದೆ. range along the sea ಕರಾವಳಿಯುದ್ದಕ್ಕೂ ಹರಡಿರು.
  2. ವ್ಯತ್ಯಾಸವಾಗುತ್ತಿರು; ಬದಲಾಯಿಸುತ್ತಿರು; ಏರುತ್ತಾ ಇಳಿಯುತ್ತಾ ಇರು: his temperature ranged from $98^\circ$ F to $103^\circ$ F ಅವನ ತಾಪವು, ಜ್ವರವು $98^\circ$ F ಇಂದ $103^\circ$ F ವರೆಗೂ ಏರುತ್ತಾ ಇಳಿಯುತ್ತಾ ಇರುತ್ತದೆ.
  3. ಮುಟ್ಟು; ತಲುಪು.
  4. (ಗೊತ್ತಾದ ಪ್ರದೇಶದಲ್ಲಿ) ಸಿಗು; ದೊರೆ; ಕಂಡುಬರು: the nightingale ranges from Channel to Warwickshire ನೈಟಿಂಗೇಲ್‍ ಹಕ್ಕಿಯು, ಇಂಗ್ಲಿಷ್‍ ಕಡಲ್ಗಾಲುವೆಯಿಂದ ವಾರಿಕ್‍ಷೈರಿನವರೆಗೂ ಕಂಡುಬರುತ್ತದೆ.
  5. (ಬ್ರಿಟಿಷ್‍ ಪ್ರಯೋಗ) (ಮುದ್ರಣ) (ಸಾಲುಗಳ, ಪಂಕ್ತಿಗಳ ತುದಿಗಳಲ್ಲಿ ಇತರ ಪಂಕ್ತಿಗಳೊಡನೆ ಮೊಳೆಗಳು) ಸಮತಲವಾಗಿರು; ಸಮಮಟ್ಟದಲ್ಲಿರು: 12-mo does not range well with the folio. 12- ಮೊ ಗಾತ್ರವು ಹೊಲಿಯೋ ಗಾತ್ರಕ್ಕೆ ಸರಿಸಮವಾಗುವುದಿಲ್ಲ.
  6. (ಒಂದರ) ಸಮಕ್ಕೆ ಬರು; (ಒಂದಕ್ಕೆ) ಸರಿಸಮವಾಗು, ಸರಿಜೋಡಿಯಾಗು, ಎಣೆಯಾಗು; (ಒಂದರ ನಡುವೆ) ಸರಿಸಮನಾಗಿ ನಿಲ್ಲು: ranges with the great writers (ಅವನು) ಶ್ರೇಷ್ಠ ಲೇಖಕರೊಡನೆ, ಸರಿಸಮನಾಗುತ್ತಾನೆ, ಎಣೆಯಾಗುತ್ತಾನೆ.
  7. (ಸಾಮಾನ್ಯವಾಗಿ ಏನನ್ನಾದರೂ ಹುಡುಕುತ್ತ, ಒಂದು ಪ್ರದೇಶದಲ್ಲೆಲ್ಲ, ಅವಧಿಯಲ್ಲೆಲ್ಲ) ಸುಳಿದಾಡು; ಸುತ್ತಾಡು; ಅಲೆದಾಡು (ರೂಪಕವಾಗಿ ಸಹ): his thoughts ranged over past, present and future ಅವನ ವಿಚಾರಸರಣಿ ಭೂತಭವಿಷ್ಯದ್ವರ್ತಮಾನಗಳಲ್ಲೆಲ್ಲ ಸುಳಿದಾಡುತ್ತಿತ್ತು.
  8. (ಪ್ರಾಚೀನ ಪ್ರಯೋಗ) ಒನೆದಾಡುತ್ತಿರು; ಚಂಚಲವಾಗಿರು; (ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ, ಯಾ ವಿಷಯದಿಂದ ವಿಷಯಕ್ಕೆ) ಹಾರಾಡುತ್ತಿರು: ranging fancy ಚಂಚಲವಾದ ಒಲವು; ವ್ಯಕ್ತಿಯಿಂದ ವ್ಯಕ್ತಿಗೆ ಹಾರುವ ಒಲವು.
  9. (ಬಂದೂಕದ ವಿಷಯದಲ್ಲಿ) ವ್ಯಾಪ್ತಿಯಿರು; ನಿರ್ದಿಷ್ಟ ದೂರದವರೆಗೆ ಕಳುಹಿಸು: ranges over a mile ಒಂದು ಮೈಲಿಗೂ ಹೆಚ್ಚಿನ ವ್ಯಾಪ್ತಿಯಿದೆ.
  10. (ಪ್ರಕ್ಷೇಪ್ಯದ ವಿಷಯದಲ್ಲಿ) ನಿರ್ದಿಷ್ಟ ದೂರ ಸಾಗು, ವ್ಯಾಪಿಸು.
  11. (ಗುರಿಯ ಆಚೆ ಮತ್ತು ಈಚೆ ಗುಂಡು ಹಾರಿಸಿ ಸರಿಹೊಂದಿಸುವ ಮೂಲಕ) ಗುರಿಯ ನೆಲೆಯನ್ನು ಕಂಡುಹಿಡಿ, ನಿರ್ಧರಿಸು.
ಪದಗುಚ್ಛ

range oneself (ಪ್ರಾಚೀನ ಪ್ರಯೋಗ) (ವಿವಾಹಿತವಾಗಿ) ಸಮಾಜದಲ್ಲಿ ನೆಲೆಗೊಳ್ಳು, ನೆಲೆಯಾಗಿ ನಿಲ್ಲು, ಸಭ್ಯನಾಗಿ ಬದುಕು.