See also 1rally  3rally
2rally ರ್ಯಾಲಿ
ನಾಮವಾಚಕ
(ಬಹುವಚನ rallies).
  1. (ಓಡಿ ಹೋಗುತ್ತಿರುವ ಸೈನ್ಯಪಡೆಗಳ ವಿಷಯದಲ್ಲಿ)
    1. ಪುನಸ್ಸಂಘಟನೆ; ಮತ್ತೆ ಒಟ್ಟುಗೂಡುವಿಕೆ.
    2. ಹೋರಾಟದ ಪುನಾರಾರಂಭ.
  2. (ಹೊಸ ಪ್ರಯತ್ನಕ್ಕಾಗಿ) ಒಟ್ಟುಗೂಡುವಿಕೆ; ಸಂಘಟನೆ; ಜಮಾವಣೆ.
  3. (ನಿಶ್ಯಕ್ತಿ, ರೋಗ ಮೊದಲಾದವುಗಳಿಂದ) ಚೇತರಿಸಿಕೊಳ್ಳುವುದು; ಕುದುರಿಕೊಳ್ಳುವುದು.
  4. ರ್ಯಾಲಿ; ಲಾನ್‍ ಟೆನಿಸ್‍ ಮೊದಲಾದ ಆಟಗಳಲ್ಲಿ (ಸ್ಕೋರ್‍ ಮಾಡುತ್ತಿರುವ ಪಾಯಿಂಟನ್ನು ನಿರ್ಣಯಿಸುವ ಮುನ್ನ) ಒಂದರ ಮೇಲೊಂದಾಗಿ ಹಿಂದಿರುಗಿಸಿದ ಚೆಂಡಿನ ಹೊಡೆತಗಳ ಶ್ರೇಣಿ.
  5. ರ್ಯಾಲಿ:
    1. ಸಮಾನ ಮನಸ್ಕರ ಗುಂಪು; ಸಹಮನಸ್ಕ ಸಮೂಹ; ಸಮಾನ ಆಸಕ್ತಿಯ ವ್ಯಕ್ತಿಗಳ ಯಾ ಬೆಂಬಲಿಗರ ಸಭೆ.
    2. (ಸಾಮಾನ್ಯವಾಗಿ ಸಾರ್ವಜನಿಕ ರಸ್ತೆಗಳಲ್ಲಿ ನಡೆಯುವ) ಮೋಟಾರು ವಾಹನಗಳ ಓಟದ ಸ್ಪರ್ಧೆ.