See also 2rally  3rally
1rally ರ್ಯಾಲಿ
ಸಕರ್ಮಕ ಕ್ರಿಯಾಪದ
  1. (ಸದೆಬಡಿಯಲ್ಪಟ್ಟು ದಿಕ್ಕಾಪಾಲಾಗಿ ಓಡುತ್ತಿರುವ ಸೇನೆ, ಪಡೆ ಮೊದಲಾದವನ್ನು)
    1. ಪುನರ್ವ್ಯೂಹಗೊಳಿಸು; ಮತ್ತೆ ಸೇರಿಸು, ಒಟ್ಟುಗೂಡಿಸು.
    2. ಹೋರಾಟ ಪುನರಾರಂಭಿಸುವಂತೆ ಮಾಡು.
  2. (ಬೆಂಬಲಕ್ಕಾಗಿ ಯಾ ಒಟ್ಟುಗೂಡಿ ಪ್ರಯತ್ನಿಸುವುದಕ್ಕಾಗಿ, ಜನರನ್ನು) ಸೇರಿಸು; ಕಲೆಹಾಕು; ಒಟ್ಟುಗೂಡಿಸು; ಜಮಾಯಿಸು: rallied his party round (or behind) him ತನ್ನ ಪಕ್ಷವನ್ನು (ಸಂಘಟಿತ ಪ್ರಯತ್ನಕ್ಕಾಗಿ) ಅವನ ಸುತ್ತ (ಯಾ ಹಿಂದೆ) ಒಟ್ಟುಗೂಡಿಸಿದ.
    1. (ಸಂಕಲ್ಪಶಕ್ತಿಯಿಂದ ಧೈರ್ಯ ಮೊದಲಾದವನ್ನು) ಸಚೇತನಗೊಳಿಸು; ಪುನಶ್ಚೇತನಗೊಳಿಸು.
    2. (ಆತ್ಮಾರ್ಥಕ) ಚೇತರಿಸಿಕೊ; ಕುದುರಿಕೊ; ಸಚೇತನಗೊಳಿಸಿಕೊ; ನವಚೈತನ್ಯ ತಂದುಕೊ.
  3. (ವ್ಯಕ್ತಿ ಯಾ ಪ್ರಾಣಿಯನ್ನು) ನವಚೈತನ್ಯ ಬರುವಂತೆ ಮಾಡು; ಹೊಸ ಹುರುಪು ಪಡೆಯುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. (ಚದುರಿಹೋಗುತ್ತಿರುವ ಸೇನೆ, ಪಡೆ ಮೊದಲಾದವುಗಳ ವಿಷಯದಲ್ಲಿ)
    1. ಪುನರ್ವ್ಯೂಹಗೊಳ್ಳು; ಒಟ್ಟುಗೂಡು.
    2. ಹೋರಾಟ ಪುನರಾರಂಭಿಸು.
  2. (ಹೀಗೆ) ಒಟ್ಟುಗೂಡು; ಜಮಾಯಿಸು; ಸೇರು: his party rallied to him ಅವನ ಪಕ್ಷವು ಅವನ ಹಿಂದೆ ಒಟ್ಟುಗೂಡಿತು.
  3. (ಬಲಹೀನತೆ, ರೋಗ, ಭಯ ಮೊದಲಾದವುಗಳಿಂದ) ಕುದುರಿಕೊ; ಚೇತರಿಸಿಕೊ.
  4. (ಷೇರು ಬೆಲೆಗಳು ಮೊದಲಾದವುಗಳ ವಿಷಯದಲ್ಲಿ) ಕುಸಿತದಿಂದ ಚೇತರಿಸಿಕೊ; ಪುನಶ್ಚೇತನ ಪಡೆ.