See also 1rain
2rain ರೇನ್‍
ಸಕರ್ಮಕ ಕ್ರಿಯಾಪದ
  1. ಮೇಲಿಂದ ಸುರಿಸು, ಬೀಳಿಸು.
  2. (ರೂಪಕವಾಗಿ) ಮಳೆಯಂತೆ ಸುರಿಸು; ದಂಡಿಯಾಗಿ, ಸಮೃದ್ಧವಾಗಿ – ಕೊಡು: they rained flowers upon him ಅವರು ಅವನ ಮೇಲೆ ಹೂವಿನ ಮಳೆಗರೆದರು. he rained blows upon the boy ಹುಡುಗನ ಮೇಲೆ ಅವನು ಏಟುಗಳ ಮಳೆಗರೆದ. his eyes rained tears ಅವನ ಕಣ್ಣುಗಳು ಕಣ್ಣೀರ ಮಳೆಗರೆದುವು. rain influence ಪ್ರಭಾವದ ಮಳೆಕರೆ; ಪ್ರಭಾವವನ್ನು ವರ್ಷಿಸು. he rained benefits upon us ನಮ್ಮ ಮೇಲೆ ಆತ ಉಪಕಾರಗಳ ಮಳೆಗರೆದ.
ಅಕರ್ಮಕ ಕ್ರಿಯಾಪದ
  1. (ದೇವರು, ಆಕಾಶ) ಮಳೆ – ಕರೆ, ಹೊಯಿಸು, ಬೀಳಿಸು, ವರ್ಷಿಸು, ಸುರಿಸು: God rains ದೇವರು ಮಳೆಗರೆಯುತ್ತಾನೆ. the sky rains ಆಕಾಶ ಮಳೆ ಸುರಿಸುತ್ತದೆ.
  2. ಮಳೆ – ಬೀಳು, ಸುರಿ, ಹೊಯ್ಯು, ಕರೆ: it rains ಮಳೆ ಬೀಳುತ್ತದೆ.
  3. ಮಳೆಯಂತೆ ಸುರಿ, ಬೀಳು: tears rained down their cheeks ಕಣ್ಣೀರು ಅವರ ಕೆನ್ನೆಗಳ ಮೇಲೆ ಸುರಿಯಿತು. blows rained upon him ಅವನ ಮೇಲೆ ಏಟುಗಳ ಸುರಿಮಳೆ ಆಯಿತು, ಬಿದ್ದಿತು.
  4. (ಆಕಾಶ, ಮೋಡಗಳು ಮೊದಲಾದವುಗಳ ವಿಷಯದಲ್ಲಿ) ಮಳೆ ಕರೆ.
ಪದಗುಚ್ಛ
  1. it rained blood, fire, etc., ರಕ್ತ, ಬೆಂಕಿ, ಮೊದಲಾದವುಗಳ ಸುರಿಮಳೆ ಬಿತ್ತು.
  2. it rains cats and dogs ಮುಸಲಧಾರೆ ಬೀಳುತ್ತಿದೆ; ಪ್ರಚಂಡವಾದ ಮಳೆ ಸುರಿಯುತ್ತಿದೆ.
  3. it rains in (ಮನೆ ಮೊದಲಾದವುಗಳ) ಒಳಕ್ಕೆ ಮಳೆ ಇಳಿಯುತ್ತದೆ.
  4. it has rained itself out ಸುರಿದು ಸುರಿದು ಮಳೆ ನಿಂತುಹೋಗಿದೆ.
  5. it never rains but it pours ಘಟನೆಗಳು ನಡೆದರೆ ಒಂದರ ಮೆಲೊಂದು ನಡೆಯುತ್ತವೆ; (ಮುಖ್ಯವಾಗಿ) ಸಂಕಟಗಳು ಬಂದರೆ ಪರಂಪರೆಯಾಗಿ ಬರುತ್ತವೆ.
  6. rain off(or ಅಮೆರಿಕನ್‍ ಪ್ರಯೋಗ out) (ಮುಖ್ಯವಾಗಿ ಕರ್ಮಣಿಯಲ್ಲಿ) (ಒಂದು ಘಟನೆ ಮೊದಲಾದವನ್ನು), ಮಳೆಯಿಂದಾಗಿ ರದ್ದುಪಡಿಸು.