See also 2rain
1rain ರೇನ್‍
ನಾಮವಾಚಕ
  1. ಮಳೆ; ವೃಷ್ಟಿ; ವರ್ಷ:
    1. ಕಣ್ಣಿಗೆ ಕಾಣುವಂತೆ ಹನಿಹನಿಯಾಗಿ ಬೀಳುವ, ವಾತಾವರಣದಲ್ಲಿನ ಘನೀಕರಿಸಿದ ತೇವದ ಅಂಶ.
    2. ಮಳೆ (ಬೀಳುವುದು, ಹನಿಯುವುದು).
  2. (ಬಹುವಚನದಲ್ಲಿ), ಮಳೆಯ ಧಾರೆ; ವರ್ಷಧಾರೆ.
  3. (ಯಾವುದೇ ದ್ರವಗಳು, ಘನ ಕಣಗಳು ಯಾ ವಸ್ತುಗಳ, ಮಳೆಯಂಥ) ಸುರಿತ; ವರ್ಷಾಪಾತ; ಮಳೆ (ರೂಪಕವಾಗಿ ಸಹ): a rain of ashes ಬೂದಿಯ ಸುರಿತ. a rain of fire ಅಗ್ನಿವರ್ಷ; ಬೆಂಕಿ ಮಳೆ. rain of melody ನಾದವರ್ಷ.
  4. ಭಾರಿ ಯಾ ಅಧಿಕ ಮೊತ್ತ; ಸುರಿಮಳೆ: a rain of congratulations ಅಭಿನಂದನೆಗಳ ಸುರಿಮಳೆ.
ಪದಗುಚ್ಛ
  1. rain or shine
    1. ಮಳೆಯೋ ಬಿಸಿಲೋ; ಮಳೆಯೇ ಇರಲಿ, ಬಿಸಿಲೇ ಇರಲಿ.
    2. ಏನೇ ಒದಗಲಿ; ಏನೇ ಸಂಭವಿಸಲಿ.
  2. the rains (ಉಷ್ಣವಲಯದ ದೇಶಗಳಲ್ಲಿ) ಮಳೆಗಾಲ; ವರ್ಷಾಕಾಲ.
  3. (ನೌಕಾಯಾನ) the Rains (ಅಟ್ಲಾಂಟಿಕ್‍ ಸಾಗರದ, $4^\circ-10^\circ$ ಉತ್ತರ ಅಕ್ಷಾಂಶಕ್ಕೊಳಪಟ್ಟ) ಮಳೆಯ ಪ್ರದೇಶ; ಮಳೆನಾಡು.