See also 2quarrel  3quarrel
1quarrel ಕ್ವಾರಲ್‍
ನಾಮವಾಚಕ
  1. ವ್ಯಾಜ್ಯ; ವಿವಾದ; ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾದವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ: have no quarrel against (or with) him ಅವನ ಜತೆ ನನಗೇನೂ ಜಗಳವಿಲ್ಲ.
  2. (ಪರಸ್ಪರ) ಜಗಳ; ಕಲಹ; ವ್ಯಾಜ್ಯ; ಕದನ; ಕಚ್ಚಾಟ.
  3. ಸ್ನೇಹ ಯಾ ಬಾಂಧವ್ಯದ ವಿಚ್ಛೇದ.
ಪದಗುಚ್ಛ
  1. espouse one’s quarrel (ಒಬ್ಬನ ವ್ಯಾಜ್ಯದಲ್ಲಿ) ಅವನ ಪರವಾಗಿ ಹೋರಾಡು; ಅವನ ಪಕ್ಷ ವಹಿಸು; ನ್ಯಾಯ ದೊರಕಿಸಿಕೊಡಲು ಅವನಿಗೆ ನೆರವಾಗು.
  2. find quarrel in a straw ಣಮಾತ್ರಕ್ಕೆ ಜಗಳವಾಡು; ಅಲ್ಪ ಕಾರಣಕ್ಕಾಗಿ ಜಗಳ ಹೂಡು.
  3. in a good quarrel ನ್ಯಾಯವಾದ ವಿವಾದದಲ್ಲಿ.
  4. pick a quarrel with ಕಾಲು ಕೆರೆದುಕೊಂಡು ಜಗಳಕ್ಕೆ ಹೋಗು; ಇಲ್ಲದ ಸಲ್ಲದ ನೆವ ತೆಗೆದು ಜಗಳ ಹೂಡು.