1quadruple ಕ್ವಾಡ್ರುಪಲ್‍
ಗುಣವಾಚಕ
  1. ಚತುಃಪಕ್ಷ; ಚತುರ್ಭಾಗ; ಚತುರಂಶೀ; ನಾಲ್ಕು ಪಕ್ಷಗಳು, ಭಾಗಗಳು ಯಾ ಅಂಶಗಳನ್ನು ಒಳಗೊಂಡ: quadruple alliance ಚತುಃಪಕ್ಷ ಸಂಬಂಧ.
  2. (ಸಂಗೀತ) ಚತುಷ್ಕಾಲ: quadruple time (or rhythm) ಚತುಷ್ಕಾಲದ ಆವರ್ತ; ನಾಲ್ಕು ತಾಳಗಳು ಬೀಳುವಷ್ಟು ಪ್ರಮಾಣದ ಲಯ.
  3. ನಾಲ್ಮಡಿ; ನಾಲ್ವಡಿ; ಚತುರ್ಗುಣ; ನಾಲ್ಕು ಪಟ್ಟಿನ; ಪ್ರಮಾಣದಲ್ಲಿ ಯಾ ಸಂಖ್ಯೆಯಲ್ಲಿ ಒಂದರ ನಾಲ್ಕರಷ್ಟಕ್ಕೆ ಸಮನಾದ.
  4. ಪ್ರಮಾಣದಲ್ಲಿ ಯಾ ಸಂಖ್ಯೆಯಲ್ಲಿ ಒಂದರ ನಾಲ್ಕರಷ್ಟು ಮಿಗಿಲಾದ, ಉತ್ತಮವಾದ; ಚತುರ್ಗುಣಾ\-ಧಿಕ: has a light and heat quadruple of (or to that of) the earth ಭೂಮಿಯ ಬೆಳಕು ಮತ್ತು ಶಾಖಕ್ಕೆ ನಾಲ್ಕರಷ್ಟು ಮಿಗಿಲಾದ ಬೆಳಕು ಮತ್ತು ಶಾಖಗಳನ್ನು ಹೊಂದಿದೆ.