See also 1pole  2pole
3pole ಪೋಲ್‍
ನಾಮವಾಚಕ
  1. ಧ್ರುವ:
    1. ಆಕಾಶದಲ್ಲಿ ಕಾಣಬರುವ ನಕ್ಷತ್ರಗಳೆಲ್ಲ ಯಾವ ಅಕ್ಷದ ಸುತ್ತ ತಿರುಗುತ್ತಿರುವಂತೆ ತೋರುವುವೋ ಆ ಅಕ್ಷವು ಖಗೋಳವನ್ನು ಉತ್ತರದಲ್ಲಿ ಮತ್ತು ದಕ್ಷಿಣದಲ್ಲಿ ಸಂಧಿಸುವ ಎರಡು ಬಿಂದುಗಳಲ್ಲಿ ಒಂದು.
    2. ಭೂಮಿಯ ದೈನಂದಿನ ಚಲನೆ ಯಾವ ಅಕ್ಷದ ಮೇಲೆ ನಡೆಯುವುದೋ ಆ ಅಕ್ಷವೂ ಉತ್ತರದಲ್ಲಿ ಮತ್ತು ದಕ್ಷಿಣದಲ್ಲಿ ಭೂಮಿಯ ಮೇಲ್ಮೈಯನ್ನು ಸಂಧಿಸುವ ಎರಡು ಬಿಂದುಗಳಲ್ಲಿ ಒಂದು.
    3. (ಜ್ಯಾಮಿತಿ) (ಯಾವುದೇ ವೃತ್ತಕ್ಕೆ ಸಂಬಂಧಿಸಿದಂತೆ) ವೃತ್ತದ ಅಕ್ಷವು ವೃತ್ತವನ್ನೊಳಗೊಂಡಿರುವ ಗೋಲದ ಮೇಲ್ಮೈಯನ್ನು ಸಂಧಿಸುವ ಎರಡು ಬಿಂದುಗಳಲ್ಲಿ ಒಂದು.
    4. (ಇತರ ಬಿಂದುಗಳ ಸ್ಥಾನಗಳನ್ನು ನಿರ್ದೇಶಿಸುವ ಸಲುವಾಗಿ ಬಳಸುವ) ಸ್ಥಿರವಾದ ಬಿಂದು.
    5. (ಅಯಸ್ಕಾಂತದ ಎರಡು ತುದಿಗಳಲ್ಲಿ) ಕಾಂತದ ಬಲರೇಖೆಗಳು ಬಂದು ಸೇರುವ ಎರಡು ಬಿಂದುಗಳಲ್ಲಿ ಒಂದು.
    6. ವಿದ್ಯುತ್ಕೋಶದ ಯಾ ಬ್ಯಾಟರಿಯ ಎರಡು (ಧನ ಯಾ ಋಣ) ಅಗ್ರಗಳಲ್ಲಿ ಒಂದು.
    7. (ಜೀವವಿಜ್ಞಾನ) ಅಂಡಾಕಾರದ ಯಾ ಗೋಲಾಕಾರದ ಯಾವುದೇ ಅಂಗದ ಪ್ರಧಾನ ಅಕ್ಷದ ಎರಡು ತುದಿಗಳಲ್ಲಿ ಒಂದು.
  2. (ರೂಪಕವಾಗಿ) ಧ್ರುವ; ಪರಸ್ಪರ ವಿರುದ್ಧವಾದ ಎರಡು ತತ್ತ್ವಗಳಲ್ಲಿ ಯಾ ಭಾವನೆಗಳಲ್ಲಿ ಒಂದು.
ಪದಗುಚ್ಛ
  1. be poles apart (or asunder) (ಮುಖ್ಯವಾಗಿ ಸ್ವಭಾವ ಯಾ ಅಭಿಪ್ರಾಯದಲ್ಲಿ) ಪರಸ್ಪರ ತೀರ ಭಿನ್ನವಾಗಿರು.
  2. celestial pole ಖಾಗೋಳಿಕ ಧ್ರುವ.
  3. from pole to pole ಜಗತ್ತಿನಾದ್ಯಂತ.
  4. geographic pole ಭೌಗೋಳಿಕ ಧ್ರುವ.
  5. magnetic pole ಕಾಂತೀಯ ಧ್ರುವ; ಭೌಗೋಳಿಕ ಉತ್ತರ ಮತ್ತು ದಕ್ಷಿಣಧ್ರುವಗಳ ಸಮೀಪದಲ್ಲಿ ಕಾಂತಸೂಚಿ ಭೂಸಮತಲಕ್ಕೆ ಲಂಬವಾಗಿ ನಿಲ್ಲುವ ಎರಡು ಬಿಂದುಗಳಲ್ಲಿ ಒಂದು.