1opposite ಆಪಸಿಟ್‍
ಗುಣವಾಚಕ

(ಅನೇಕ ವೇಳೆ to ಒಡನೆ).

  1. ಎದುರುಬದುರಾದ; ಅಭಿಮುಖವಾದ: on opposite sides of the square ಚೌಕದ ಎದುರುಬದುರು ಕಡೆಗಳಲ್ಲಿ. the tree opposite the house ಮನೆಯ ಎದುರಿಗಿರುವ ಮರ.
  2. (ಸಸ್ಯವಿಜ್ಞಾನ) (ಎಲೆಗಳು ಮೊದಲಾದವುಗಳ ವಿಷಯದಲ್ಲಿ) ಅಭಿಮುಖವಾಗಿರುವ; ತಾಳಿನಲ್ಲಿ ಒಂದೇ ಎತ್ತರದಲ್ಲಿ ಎದುರುಬದುರಾಗಿರುವ: opposite leaves ಅಭಿಮುಖ ಪರ್ಣಗಳು; ಎದುರೆಲೆಗಳು; ತಾಳಿನಲ್ಲಿ ಒಂದೇ ಎತ್ತರದಲ್ಲಿ ಎದುರುಬದುರಾಗಿರುವ ಎಲೆಗಳು.
  3. ಇನ್ನೊಂದು ಅಂಗಕ್ಕೆ ನೇರ ಎದುರಿಗಿರುವ, ಅಭಿಮುಖವಾಗಿರುವ.
  4. ವಿರುದ್ಧ ಬಗೆಯ, ತೆರನ.
  5. ಬೇರೆಯಾದ; ವ್ಯತಿರಿಕ್ತವಾದ; ತೀರ ವ್ಯತ್ಯಾಸವಾದ: of an opposite kind to (from) what I expected ನಾನು ನಿರೀಕ್ಷಿಸಿದುದಕ್ಕೆ ತೀರಾ ವಿರುದ್ಧ ಬಗೆಯ.
  6. ವಿದೃಶ; ಭಿನ್ನ; ಅನ್ಯ; ಹೋಲಿಸಿದ ಎರಡರಲ್ಲಿ (ಒಂದನ್ನು ಬಿಟ್ಟು) ಇನ್ನೊಂದರ; ಬೇರೆಯಾದ.
  7. (ಕೋನಗಳ ವಿಷಯದಲ್ಲಿ) ವಿರುದ್ಧ; ಅಭಿಮುಖ; ಛೇದಿಸುವ ಎರಡು ರೇಖೆಗಳ ಎದುರುಬದುರಾಗಿರುವ ಕಡೆಗಳ.
ಪದಗುಚ್ಛ

the opposite sex ಭಿನ್ನ ಲಿಂಗದವರು (ಹೆಂಗಸರ ದೃಷ್ಟಿಯಿಂದ ಗಂಡಸರು, ಗಂಡಸರ ದೃಷ್ಟಿಯಿಂದ ಹೆಂಗಸರು).