2move
ಮೂವ್
ಸಕರ್ಮಕ ಕ್ರಿಯಾಪದ
- ಒಂದರ ಸ್ಥಳ ಬದಲಾಯಿಸು; ಕದಲಿಸು.
- (ಚದುರಂಗ ಮೊದಲಾದ ಆಟಗಳಲ್ಲಿ) ಕಾಯಿಯನ್ನು ನಡೆಸು; ಕಾಯಿಯ ಸ್ಥಳ ಬದಲಾಯಿಸು.
- ಚಲಿಸುವಂತೆ ಮಾಡು; ಚಲನಗೊಳಿಸು.
- ಚಲನೆಯಲ್ಲಿರಿಸು; ಚಲನೆಯಲ್ಲಿಡು.
- ಅಲುಗಾಡಿಸು; ಅಲ್ಲಾಡಿಸು; ಕಲಕು.
- (ತನ್ನ ದೇಹ, ಕೈಕಾಲು, ಮೊದಲಾದವನ್ನು) ಆಡಿಸು; (ಅವುಗಳ ಭಂಗಿಯನ್ನು) ಬದಲಾಯಿಸು.
- (ಮಲ) ವಿಸರ್ಜನೆಗೊಳಿಸು; ಕಳೆ; ವಿಸರ್ಜನೆಯಾಗುವಂತೆ ಮಾಡು.
- (ನಗು, ಕೋಪ, ಮೊದಲಾದವನ್ನು ವ್ಯಕ್ತಿಯಲ್ಲಿ) ಕೆರಳಿಸು; ಪ್ರಚೋದಿಸು; ಉಂಟುಮಾಡು.
- (ವ್ಯಕ್ತಿಯಲ್ಲಿ) ಸಾಮಾನ್ಯವಾಗಿ ಅನುಕಂಪ, ಕನಿಕರ ಹುಟ್ಟುವಂತೆ ಮಾಡು; ಮನ ಕರಗಿಸು.
- (ವ್ಯಕ್ತಿಯನ್ನು ಕಾರ್ಯಕ್ಕೆ) ಪ್ೇರಿಸು; ಪ್ರಚೋದಿಸು; ಪ್ರವೃತ್ತನಾಗುವಂತೆ ಮಾಡು; ಮನಸ್ಸು ಬರುವಂತೆ ಮಾಡು [ಉದಾಹರಣೆಗೆ the spirit moves me:
- (ಹಿಂದೆ Quaker ಪಂಥದವರ ಅರ್ಥದಲ್ಲಿ) ಪವಿತ್ರಾತ್ಮ (Holy Spirit) ನನ್ನನ್ನು ಪ್ೇರೇಪಿಸುತ್ತಿದೆ.
- (ಈಗಿನ ಅರ್ಥ) (ಮಾಡಲು) ನನಗೆ ಮನಸ್ಸು ಹುಟ್ಟಿದೆ, ಬಂದಿದೆ].
- (ನ್ಯಾಯಸ್ಥಾನ ಮೊದಲಾದವಕ್ಕೆ) ವಿಧಿವಿಹಿತವಾಗಿ – ಪ್ರಾರ್ಥನೆ ಸಲ್ಲಿಸು, ಮನವಿ ಸಲ್ಲಿಸು, ಅಹವಾಲು ಸಲ್ಲಿಸು, ಅರ್ಜಿ ಕೊಡು.
- (ಮಂತ್ರಾಲೋಚನ ಸಭೆ ಮೊದಲಾದವುಗಳಲ್ಲಿ)
- (ಪ್ರಶ್ನೆಯನ್ನು) ಕೇಳು.
- (ನಿರ್ಣಯ, ಅಭಿಪ್ರಾಯ, ಮೊದಲಾದವನ್ನು) ಸೂಚಿಸು; ಮಂಡಿಸು; ಮುಂದಿಡು.
- (ಆಜ್ಞೆ ಮಾಡಿ) ವ್ಯಕ್ತಿಯನ್ನು ಮುಂದಕ್ಕೆ ಹೋಗುವಂತೆ, ಸರಿಯುವಂತೆ ಮಾಡು.
- ಹೊಸ ಸ್ಥಳಕ್ಕೆ ಬದಲಾಯಿಸು: move house ಬೇರೆ ಮನೆಗೆ ಹೋಗು; ಮನೆ ಬದಲಾಯಿಸು. move offices ಕಚೇರಿಯ ಸ್ಥಳವನ್ನು ಬದಲಾಯಿಸು.
ಅಕರ್ಮಕ ಕ್ರಿಯಾಪದ
- ಚಲಿಸು; ಸ್ಥಳಾಂತರ ಮಾಡು; ಸ್ಥಳದಿಂದ ಸ್ಥಳಕ್ಕೆ ಹೋಗು.
- ಚಲಿಸುತ್ತಿರು; ಚಲನೆಯಲ್ಲಿರು.
- ಅಲ್ಲಾಡು; ಅಲ್ಲಾಡುತ್ತಿರು.
- ಮುಂದುವರಿ; ಸಾಗು: the work moves slowly ಕೆಲಸ ನಿಧಾನವಾಗಿ ಸಾಗುತ್ತದೆ.
- (ಚದುರಂಗ ಮೊದಲಾದ ಆಟಗಳಲ್ಲಿ) ಕಾಯಿ ನಡೆಸು.
- ಬೇರೆ ಮನೆಗೆ ಹೋಗು; ಮನೆ ಬಿಡು; ವಾಸಸ್ಥಾನ ಬದಲಾಯಿಸು.
- (ವ್ಯಾಪಾರದ ಕಚೇರಿ ಮೊದಲಾದವು) ಹೊಸ ಕಟ್ಟಡಕ್ಕೆ ಹೋಗು.
- (ವ್ಯಕ್ತಿಯ ಯಾ ದೇಹದ ಯಾವುದೇ ಭಾಗದ ಭಂಗಿ) ಬದಲಾಗು; ಚಲಿಸು.
- (ನಿರ್ಜೀವ ವಸ್ತುಗಳ ವಿಷಯದಲ್ಲಿ) ಸ್ಥಳ ಬದಲಾವಣೆ ಹೊಂದು; ಸ್ಥಾನಾಂತರಿಸು.
- (ಮಲ) ಕಳೆ; ವಿಸರ್ಜನೆಯಾಗು.
- ಪ್ರಾರ್ಥಿಸು; ಕೇಳಿಕೊ; ಬೇಡಿಕೊ; ಮನವಿ ಸಲ್ಲಿಸು; ಅಹವಾಲು ಮಾಡಿಕೊಳ್ಳು; ಅರ್ಜಿ ಸಲ್ಲಿಸು.
- (ಯಾವುದೇ ವಿಷಯದಲ್ಲಿ ಕೂಡಲೇ, ಶೀಘ್ರವಾಗಿ) ಕಾರ್ಯ ಕೈಕೊಳ್ಳು; ಕಾರ್ಯಪ್ರವೃತ್ತವಾಗು: moved to reduce unemployment ನಿರುದ್ೋಗವನ್ನು ಕಡಮೆ ಮಾಡಲು ಕಾರ್ಯಪ್ರವೃತ್ತನಾದ.
- ಮುಂದುವರಿ; ಮುಂದೆ ಸಾಗು: the project is moving fast ಯೋಜನೆ ತ್ವರಿತವಾಗಿ ಮುಂದುವರಿಯುತ್ತಿದೆ.
- (ಒಂದು ನಿರ್ದಿಷ್ಟ ಸ್ಥಳ ಯಾ ತಂಡದಲ್ಲಿ) ಇರು ಯಾ ಸಕ್ರಿಯವಾಗಿ ಓಡಾಡು: moves in the best circles ವರಿಷ್ಠ ವೃತ್ತದಲ್ಲಿ ಓಡಾಡುತ್ತಾನೆ.
- (ಸರಕಿನ ವಿಷಯದಲ್ಲಿ) ಹೋಗು; ಮಾರಾಟವಾಗು.
ಪದಗುಚ್ಛ
- move about
- (ವಾಸಸ್ಥಾನವನ್ನು) ಪದೇಪದೇ ಬದಲಾಯಿಸುತ್ತಿರು.
- ಓಡಾಡುತ್ತಿರು.
- move along = ಪದಗುಚ್ಛ\((5)\).
- move heaven and earth ಸರ್ವಪ್ರಯತ್ನ ಮಾಡು; ವಿಶ್ವ ಪ್ರಯತ್ನ ಮಾಡು; ಆಕಾಶ ಭೂಮಿ ಒಂದು ಮಾಡು.
- move in
- ಹೊಸ ಮನೆಗೆ ಹೋಗು, ಪ್ರವೇಶ ಮಾಡು; ಹೊಸ ವಸತಿ ಹಿಡಿ; ಹೊಸ ವಾಸಸ್ಥಾನವನ್ನು ಸ್ವಾಧೀನಕ್ಕೆ ತೆಗೆದುಕೊ.
- ಹೊಸ ಕಸುಬು ಮೊದಲಾದವನ್ನು ಪ್ರಾರಂಭಿಸು.
- move on
- (ಮುಖ್ಯವಾಗಿ ಸಂದಣಿ, ಅಡಚಣೆ, ಮೊದಲಾದವು ಆಗುವುದನ್ನು ತಪ್ಪಿಸಲು) ಮುಂದಕ್ಕೆ ನಡೆ, ಸರಿ.
- (ಒಂದೇ ಸ್ಥಳದಲ್ಲಿ ಬಹಳ ಹೊತ್ತು ನಿಂತಿರುವವನಿಗೆ ಪೊಲೀಸಿನವನ ಆಜ್ಞೆ) ಮುಂದಕ್ಕೆ ಸರಿ; ಮುಂದಕ್ಕೆ ನಡೆ; ಮುಂದೆ ಸಾಗು, ಹೋಗು.
- move mountain.
- move out
- ಮನೆ ಬಿಡು; ವಾಸದ ಮನೆಯನ್ನು ಬದಲಾಯಿಸು.
- ಸ್ಥಾನ, ಕೆಲಸ, ಮೊದಲಾದವನ್ನು – ಬಿಡು, ತ್ಯಜಿಸು.
- move over (or up) ಸರಿ; ಜರುಗು; ಇನ್ನೊಬ್ಬರಿಗೆ ಜಾಗ ಕೊಡಲು ಪಕ್ಕಕ್ಕೆ ಸರಿ.