See also 1mask
2mask ಮಾಸ್ಕ್‍
ಸಕರ್ಮಕ ಕ್ರಿಯಾಪದ
  1. (ಮುಖವನ್ನು) ಮೊಗವಾಡ, ಮುಸುಕು, ಮೊದಲಾದವುಗಳಿಂದ – ಮುಚ್ಚು, ಮುಚ್ಚಿಕೊ.
  2. ಮೊಗವಾಡ ಧರಿಸು; ಮುಖವಾಡ ಹಾಕಿಕೊ; ಮೊಗವಾಡದಿಂದ ರೂಪ ಮರಸಿಕೊಂಡಿರು, ವೇಷ ಹಾಕಿಕೊಂಡಿರು.
  3. (ಸೈನ್ಯ)
    1. ಶತ್ರುಗಳ ಕಣ್ಣಿಗೆ ಬೀಳದಂತೆ (ಹಿರಂಗಿ ತಂಡ ಮೊದಲಾದವನ್ನು) ಮರೆಸಿಬಿಡು.
    2. (ಶತ್ರುಸೈನ್ಯ ಮೊದಲಾದವು) ಕಾರ್ಯ ನಡೆಸದಂತೆ (ತಕ್ಕಷ್ಟು ಸೈನ್ಯದೊಡನೆ ಕಾವಲಿದ್ದು) ತಡೆಯೊಡ್ಡು.
    3. ಗುಂಡಿನ ಮಾರ್ಗದಲ್ಲಿ ನಿಂತು (ಮಿತ್ರ ಸೈನ್ಯ) ಕಾರ್ಯ ಮಾಡದಂತೆ ಅಡ್ಡಿಯಾಗಿರು.
  4. (ಅಭಿರುಚಿ, ಮನೋಭಾವ, ಮೊದಲಾದವನ್ನು) ಮರೆಮಾಡು; ಮರೆಸು.
  5. ಒಂದು ಪ್ರಕ್ರಿಯೆಯಿಂದ – ರಕ್ಷಿಸು, ತಡೆ; ಹೊರತುಪಡಿಸು; ಹೊರಗಿಡು.