See also 2mask
1mask ಮಾಸ್ಕ್‍
ನಾಮವಾಚಕ
  1. (ನರ್ತನ ಗೋಷ್ಠಿ ಮೊದಲಾದವುಗಳಲ್ಲಿ ಗುರುತು ಕಾಣದಂತೆ ಮುಖಮುಚ್ಚಲು ಹಾಕಿಕೊಳ್ಳುವ, ಸಾಮಾನ್ಯವಾಗಿ ಮುಖಮಲ್ಲಿನ ಯಾ ರೇಷ್ಮೆಯ) ಬುರ್ಖಾ; ಮೋರೆಮುಸುಕು; ಮುಖತೆರೆ; ಮುಖಪರದೆ; ಮುಖ ಮುಸುಕು.
  2. (ಕತ್ತಿ ವರಸೆಗಾರ ರಕ್ಷಣೆಗಾಗಿ ಯಾ ಶಸ್ತ್ರವೈದ್ಯನು ರೋಗಿಯಿಂದ ಕಾಯಿಲೆ ತನಗೆ ಅಂಟದಂತೆ ಮುಖಕ್ಕೆ ಹಾಕಿಕೊಳ್ಳುವ ತಂತಿ ಬಲೆಯ ಯಾ ಜಾಲಕದ) ಮೊಗಕಾಪು; ಮುಖರಕ್ಷೆ.
  3. ಮೊಗವಾಡ; ಮುಖವಾಡ: Figure: masks-3
    1. (ಗ್ರೀಕ್‍ ಯಾ ರೋಮನ್‍ ನಟರು ಮುಖಕ್ಕೆ ಇಟ್ಟುಕೊಳ್ಳುತ್ತಿದ್ದ) ಮನುಷ್ಯನ ತಲೆಯ ಟೊಳ್ಳು ಆಕೃತಿ.
    2. ವಿನೋದಕ್ಕಾಗಿ ಯಾ ಹೆದರಿಸಲು, ವಿಕಾರವಾಗಿ ಕಾಣಿಸಿಕೊಳ್ಳಲು ಮುಖಕ್ಕೆ ತೊಟ್ಟುಕೊಳ್ಳುವ ಕವಚ.
  4. (ಜೇಡಿಯಲ್ಲಿ ಯಾ ಮೇಣದಲ್ಲಿ ಮಾಡಿದ, ಒಬ್ಬನ) ಮುಖದ ಪ್ರತಿಕೃತಿ (ಮುಖ್ಯವಾಗಿ ಸತ್ತವನ ಮುಖದ ಅಚ್ಚೊತ್ತಿ ತೆಗೆದ ಪಡಿಯಚ್ಚು).
  5. (ರೂಪಕವಾಗಿ) (ಗುರುತು ತಿಳಿಯದಂತೆ ಹಾಕುವ, ಮೋಸದ) ವೇಷ; ಛದ್ಮವೇಷ; ಸೋಗು; ಮಾರುವೇಷ: throw off the mask ವೇಷ ಕಿತ್ತೊಗೆ; ನಿಜಸ್ವರೂಪ ತೋರಿಸು.
  6. (ಪ್ರಾಚೀನ ಪ್ರಯೋಗ) ವೇಷಧಾರಿ; ವೇಷ ಹಾಕಿಕೊಂಡಿರುವವನು.
  7. ಪ್ರಾಣಿಯೊಂದರ (ಮುಖ್ಯವಾಗಿ ನರಿಯ) ಮುಖ ಯಾ ತಲೆ.
  8. ಶ್ವಾಸಕ; ಶ್ವಾಸಶೋಧಕ; ಉಚ್ಚ್ವಾಸದ ಗಾಳಿಯನ್ನು ಸೋಸಲು ಯಾ ಉಸಿರಾಟಕ್ಕೆ ಅನಿಲವನ್ನು ಒದಗಿಸಲು ಬಳಸುವ ಮೊಗವಾಡ.
  9. (ಛಾಯಾಚಿತ್ರಣ) ಮರೆಸುಪರದೆ; ಬಿಂಬವೊಂದರ ಒಂದು ಭಾಗವನ್ನು ಹೊರಗಿಡಲು ಬಳಸುವ ಪರದೆ.
  10. ಮುಖಲೇಪ; ಮುಖಕಾಂತಿಗಾಗಿ ಮುಖದ ಮೇಲೆ ಹರಡುವ, ಒಣಗಿದ ಮೇಲೆ ತೆಗೆದುಬಿಡುವಂಥ ಒಂದು ಪ್ರಸಾಧನ ವಸ್ತು.