See also 2lustre  3lustre
1lustre ಲಸ್ಟರ್‍
ನಾಮವಾಚಕ
  1. ಹೊಳಪು; ಹೊಗರು; ಪ್ರಕಾಶ.
  2. ಥಾಳಥಳ್ಯ; ಮಿಂಚು; ಮಿನುಗು.
  3. ಹೊಳೆಯುವ ಮೇಲ್ಮೈ.
  4. ಕಳೆ; ಕಾಂತಿ.
  5. ಪ್ರಭೆ; ತೇಜಸ್ಸು; ಉಜ್ವಲ ಪ್ರಕಾಶ.
  6. ಹೊಳೆಯುವ ಸೌಂದರ್ಯ.
  7. ಖ್ಯಾತಿ; ಕೀರ್ತಿ; ಯಶಸ್ಸು.
  8. ವೈಭವ; ಘನತೆ; ಮಹತ್ತ್ವ; ವೈಶಿಷ್ಟ್ಯ; ಹಿರಿಮೆ; ಮಹಿಮೆ: add lustre to ಕಳೆಯೇರಿಸು; ವೈಶಿಷ್ಟ್ಯಪೂರ್ಣವಾಗಿ ಮಾಡು. throw or shed lustre on ಕಾಂತಿ ಬೀರು; ವೈಭವಯುತವಾಗಿ ಮಾಡು.
  9. (ಗೊಂಚಲು ದೀಪ ಮೊದಲಾದವುಗಳ ಮೇಲಿರುವ) ಮುಮ್ಮುಖದ ತೂಗುಗಾಜು.
  10. (ಬ್ರಿಟಿಷ್‍ ಪ್ರಯೋಗ)
    1. (ನೂಲಿನ ಹಾಸು ಹಾಗೂ ಉಣ್ಣೆಯ ಹೊಕ್ಕು ಇರುವಂತೆ ತಯಾರಿಸಿದ) ಹೊಳೆಯುವ (ಮೈಯುಳ್ಳ) ತೆಳ್ಳನೆಯ ಬಟ್ಟೆ.
    2. ಹೊಳೆಯುವ (ಮೈಯುಳ್ಳ ಯಾವುದೇ ಬಗೆಯ) ಬಟ್ಟೆ.
  11. ಮೆರುಗು; ಜೇಡಿಮಣ್ಣಿನ ಪದಾರ್ಥಗಳಿಗೆ ಮಿನುಗುವ ಕಾಂತಿ ಕೊಡುವ ತೆಳುವಾದ ಲೋಹದ ಲೇಪ.