See also 2lower  3lower  4lower  5lower
1lower ಲೋಅರ್‍
ಸಕರ್ಮಕ ಕ್ರಿಯಾಪದ
  1. ಕೆಳಕ್ಕಿಳಿಸು; ಇಳಿಸು; ತಗ್ಗಿಸು.
  2. (ನೌಕಾಯಾನ)
    1. ದೋಣಿಯನ್ನು ನೀರಿಗಿಳಿಸು.
    2. ಹಾಯಿಪಟ ಮೊದಲಾದವನ್ನು ಕೆಳಕ್ಕಿಳಿಸು: lower away ಕೆಳಕ್ಕಿಳಿಸಿಬಿಡು.
  3. ತಗ್ಗಿಸು; ಎತ್ತರ ಕಡಮೆ ಮಾಡು; ಮಟ್ಟವನ್ನು ಇಳಿಸು: lower one’s eyes ದೃಷ್ಟಿ ತಗ್ಗಿಸು, ಕೆಳಕ್ಕಿಳಿಸು.
  4. (ಬೆಲೆ ಮೊದಲಾದವನ್ನು) ಇಳಿಸು; ತಗ್ಗಿಸು; ಕಡಮೆ ಮಾಡು.
  5. (ದನಿಮಟ್ಟ, ತೀವ್ರತೆ, ಮೊದಲಾದವನ್ನು) ತಗ್ಗಿಸು; ಇಳಿಸು; ಕಡಮೆ ಮಾಡು.
  6. ಕೆಳದರ್ಜೆಗಿಳಿಸು; ಕೀಳುಮಾಡು; ಕೆಳಮಟ್ಟಕ್ಕೆ ಇಳಿಸು; ಕೀಳು ಮಟ್ಟಕ್ಕೆ ತರು: novels which are likely to lower taste ಅಭಿರುಚಿಯನ್ನು ಕೆಳಮಟ್ಟಕ್ಕಿಳಿಸಬಹುದಾದ ಕಾದಂಬರಿಗಳು.
  7. ಹೀನಯಿಸು; ಅಪಮಾನಗೊಳಿಸು; ಅಗೌರವಕ್ಕೆ ಪಾತ್ರವಾಗಿಸು.
  8. ತೆಳ್ಳಗಾಗಿಸು; ಕೃಶವಾಗಿಸು; ಬಡವಾಗಿಸು: a lowering diet ಕೃಶಗೊಳಿಸುವ ಆಹಾರ.
ಅಕರ್ಮಕ ಕ್ರಿಯಾಪದ
  1. ಮುಳುಗು; ಅಸ್ತಮಿಸು: the sun lowering in the west ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಾ.
  2. ಇಳಿ; ಕೆಳಕ್ಕಿಳಿ: the water lowering in summer ಬೇಸಿಗೆಯಲ್ಲಿ ನೀರು ಇಳಿಯುತ್ತಾ.
  3. ಇಳಿಯುತ್ತಾ ಹೋಗು; ಇಳಿಜಾರಾಗು; ಇಳುಕಲಾಗು: the shores lower to the south (ಸಮುದ್ರ) ದಂಡೆಯು ದಕ್ಷಿಣಕ್ಕೆ ಇಳಿಜಾರಾಗುತ್ತಿದೆ.
  4. (ಧಾರಣೆ, ದರ, ಮೊದಲಾದವು) ಇಳಿ; ತಗ್ಗು; ಕಡಮೆಯಾಗು.
  5. (ದನಿಮಟ್ಟ ಮೊದಲಾದವು) ತಗ್ಗು; ಇಳಿ; ಕಡಮೆಯಾಗು; ಮಂದವಾಗು.