See also 1lounge
2lounge ಲೌಂಜ್‍
ನಾಮವಾಚಕ
  1. ಸೋಮಾರಿತನದ ಸುತ್ತಾಟ; ಆರಾಮದ – ಅಲೆತ, ತಿರುಗಾಟ, ಓಡಾಟ, ವಿಹಾರ.
  2. ಲೌಂಜು; ಆರಾಮ ಶಾಲೆ; ಹಾಯಾಗಿ ಕಾಲುಚಾಚಿ ಒರಗಲು ಪೀಠೋಪಕರಣಗಳಿಂದ ಸಜ್ಜುಗೊಳಿಸಿದ ಕೈಸಾಲೆ ಯಾ ನಡವೆ, ಮುಖ್ಯವಾಗಿ
    1. (ಉದಾಹರಣೆಗೆ ಹೋಟೆಲಿನಲ್ಲಿರುವ) ಸಾರ್ವಜನಿಕ ಕೊಠಡಿ.
    2. (ವಿಮಾನ ನಿಲ್ದಾಣ ಮೊದಲಾದವುಗಳಲ್ಲಿನ) ಕಾಯುವ – ಕೋಣೆ, ಅಂಗಳ; ಕಾಯುವ ಪ್ರಯಾಣಿಕರಿಗಾಗಿ ಆಸನ ವ್ಯವಸ್ಥೆ ಇರುವ ಸ್ಥಳ.
    3. ಬೈಠಕ್‍ ಖಾನೆ; ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವ ಕೋಣೆ.