See also 2lounge
1lounge ಲೌಂಜ್‍
ಸಕರ್ಮಕ ಕ್ರಿಯಾಪದ

(ಕಾಲವನ್ನು) ವ್ಯರ್ಥವಾಗಿ, ಸೋಮಾರಿಯಾಗಿ, ಸುತ್ತಾಡುತ್ತಾ, ಕಾಲು ಚಾಚಿಕೊಂಡು – ಕಳೆ: returned to Mysore to lounge away the remainder of his days ತನ್ನ ಉಳಿದ ದಿನಗಳನ್ನು ಹಾಯಾಗಿ ತಿರುಗಾಡಿಕೊಂಡು ಕಳೆಯಲು ಅವನು ಮೈಸೂರಿಗೆ ಹಿಂದಿರುಗಿದನು.

ಅಕರ್ಮಕ ಕ್ರಿಯಾಪದ
  1. ಸೋಮಾರಿತನದಿಂದ
    1. ನಿಂತಿರು.
    2. ಕಾಲೆಳೆ; ಓಡಾಡು; ಸುತ್ತಾಡು; ಅಲೆದಾಡು; ತಿರುಗಾಡು; ಠಳಾಯಿಸು.
  2. (ಕೈಕಾಲು ಚಾಚಿಕೊಂಡು) ಹಾಯಾಗಿ ಒರಗಿರು; ಆರಾಮವಾಗಿ ಉರುಳಿಕೊ; ಹಾಯಾಗಿ – ಮಲಗಿರು, ಬಿದ್ದುಕೊಂಡಿರು: we lounged in the sun all afternoon ನಾವು ಮಧ್ಯಾಹ್ನವೆಲ್ಲ ಆರಾಮವಾಗಿ ಬಿಸಿಲಿನಲ್ಲಿ ಬಿದ್ದುಕೊಂಡಿದ್ದೆವು.
  3. ವ್ಯರ್ಥವಾಗಿ ಕಾಲಕಳೆ.