See also 2loaf  3loaf
1loaf ಲೋಹ್‍
ನಾಮವಾಚಕ
(ಬಹುವಚನ loaves ಉಚ್ಚಾರಣೆ ಲೋವ್ಸ್‍).
  1. (ವಿವಿಧ ತೂಕ, ಅಳತೆ, ಆಕಾರದ ಪ್ರಮಾಣಗಳಾಗಿ ಭಾಗಮಾಡಿ ಬೇಯಿಸಿದ) ಬ್ರೆಡ್ಡಿನ – ತುಂಡು, ಖಂಡ, ಭಾಗ: house-hold loaf ಕುಟುಂಬದ (ಬಳಕೆಗಾಗಿ ಉದ್ದೇಶಿಸಿದ) ಬ್ರೆಡ್‍ (ಭಾಗ). quartern loaf ನಾಲ್ಕು ಪೌಂಡ್‍ (ತೂಕದ) ಬ್ರೆಡ್‍(ಭಾಗ). white loaf (ಮೊದಲ ದರ್ಜೆ ಹಿಟ್ಟಿನಿಂದ ತಯಾರಿಸಿದ) ಬಿಳಿ ಬ್ರೆಡ್ಡು.
  2. (ಒಂದು ನಿರ್ದಿಷ್ಟ ಆಕಾರಕ್ಕೆ ತಂದಿರುವ) ಇತರ ಆಹಾರದ ತುಂಡು: sugar loaf ಸಕ್ಕರೆ ಅಚ್ಚು; ಶಂಕುವಿನಾಕಾರದಲ್ಲಿ ಅಚ್ಚು ಹೊಯ್ದ ಸಕ್ಕರೆ. meat loaf ಮಾಂಸದ ಬ್ರೆಡ್ಡು; ಬ್ರೆಡ್ಡಿನ ಆಕಾರದಲ್ಲಿ ಬೇಯಿಸಿದ ಮಾಂಸ.
  3. (ಅಶಿಷ್ಟ) (ಮುಖ್ಯವಾಗಿ ಸಾಮಾನ್ಯ ಜ್ಞಾನದ ಆಕರವಾದ) ತಲೆ; ಬುದ್ಧಿ; ತಿಳಿವಳಿಕೆ: use one’s loaf ತಲೆ ಓಡಿಸು; ಬುದ್ಧಿ ಉಪಯೋಗಿಸು.
  4. (ಕೋಸುಗೆಡ್ಡೆ ಯಾ ಲೆಟಿಸ್ಸಿನ) ತಲೆ; ಶಿರ; ತಲೆಯಾಕಾರದ ದುಂಡುಗೊಂಡೆ.
ನುಡಿಗಟ್ಟು
  1. half a loaf is better than no bread ಬರಿಹೊಟ್ಟೆಗಿಂತ ಅರೆಹೊಟ್ಟೆ ಮೇಲು; ಬರಿಕೈಗಿಂತ ಹಿತ್ತಾಳೆ ಕಡಗ ಮೇಲು.
  2. loaves and fishes (ಧಾರ್ಮಿಕ ನಿಲುವಿಗೆ ಯಾ ಸಾರ್ವಜನಿಕ ಸೇವೆಗೆ ಕಾರಣವಾದ) ವೈಯಕ್ತಿಕ ಲಾಭ; ಸ್ವಪ್ರಯೋಜನ.