See also 2living
1living ಲಿವಿಂಗ್‍
ನಾಮವಾಚಕ
  1. ಜೀವಿಕೆ; ಹೊಟ್ಟೆಪಾಡು; ಜೀವನೋಪಾಯ; ಜೀವನಾವಶ್ಯಕತೆಗಳು; ಹೊಟ್ಟೆ ಹೊರೆಯಲು ಬೇಕಾದ ವಸ್ತುಗಳು: make one’s living ಹೊಟ್ಟೆಹೊರೆ; ಜೀವನಾವಶ್ಯಕತೆಗಳನ್ನು ಸಂಪಾದಿಸು. made my living as a journalist ಪತ್ರಿಕೋದ್ಯೋಗಿಯಾಗಿ ಜೀವನ ನಡೆಸಿದೆ. what does she do for a living? ಹೊಟ್ಟೆಪಾಡಿಗೆ ಅವಳು ಏನು ಮಾಡುತ್ತಾಳೆ?
  2. (ಬ್ರಿಟಿಷ್‍ ಪ್ರಯೋಗ) (ಚರ್ಚ್‍) ಆದಾಯ ಯಾ ಆಸ್ತಿ ಇರುವ ವಿಕರ್‍ ಯಾ ರೆಕ್ಟರ್‍ನ ಸ್ಥಾನ, ಪದವಿ.
  3. ಇರುವಿಕೆ; ವಾಸ; ವಾಸಿಸುವುದು: living in the same house became impossible ಅದೇ ಮನೆಯಲ್ಲಿ ಇರುವುದು ಅಸಾಧ್ಯವಾಯಿತು.
  4. ಬದುಕು; ಜೀವನ (ನಡೆಸುವುದು): the art of living ಜೀವನ ಕಲೆ.
ಪದಗುಚ್ಛ
  1. good living ಮೃಷ್ಟಾನ್ನ ಭೋಜನ; ಪುಷ್ಕಳ ಊಟ.
  2. plain living and high thinking ಸರಳ ಜೀವನ ಮತ್ತು ಉನ್ನತ ಚಿಂತನೆ.