See also 2liver
1liver ಲಿವರ್‍
ನಾಮವಾಚಕ
    1. (ಕಶೇರುಕ ಪ್ರಾಣಿಗಳಲ್ಲಿರುವ) ಪಿತ್ತಜನಕಾಂಗ; ಯಕೃತ್ತು; ಕಾಳಿಜ; ಕಲಿಜ.
    2. (ಇತರ ಪ್ರಾಣಿಗಳಲ್ಲಿನ) ಯಕೃತ್ತು; ಯಕೃತ್ತಿನಂಥದೇ ಅಂಗ.
  1. (ಆಹಾರಕ್ಕಾಗಿ ಬಳಸುವ ಕೆಲವು ಪ್ರಾಣಿಗಳ) ಯಕೃತ್ತಿನ, ಪಿತ್ತಜನಕಾಂಗದ – ಮಾಂಸ.
  2. ಯಕೃತ್ತಿನ ಬಣ್ಣ, ವರ್ಣ; ಎಣ್ಣೆಗೆಂಪು ಛಾಯೆಯ ಕಂದುಬಣ್ಣ.
  3. ಯಕೃತ್ತಿನ ರೋಗ (ಸ್ಥಿತಿ); ಪಿತ್ತವ್ಯಾಧಿ.
  4. (ಪ್ರಾಚೀನ ಪ್ರಯೋಗ) ಭಾವಗಳ ಯಾ ಮನೋರಾಗಗಳ ನೆಲೆ ಎಂದು ಭಾವಿತವಾದ ಪಿತ್ತಜನಕಾಂಗ.
ಪದಗುಚ್ಛ
  1. hot liver
    1. ರಾಗೋದ್ರೇಕ ಸ್ವಭಾವ.
    2. ಕಾಮುಕತೆ; ಕಾಮಾಸಕ್ತಿ; ಕಾಮೋದ್ರೇಕ ಸ್ವಭಾವ.
  2. lily livered ಪುಕ್ಕಲುತನದ; ಹೇಡಿಸ್ವಭಾವದ.
  3. white (or lily) liver ಹೇಡಿತನ; ಪುಕ್ಕಲು.