See also 2lick
1lick ಲಿಕ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. ನೆಕ್ಕು; [ಆಹಾರದ ರುಚಿ ನೋಡಲು, ಬಾಯಿ ಒದ್ದೆ ಮಾಡಿಕೊಳ್ಳಲು ಯಾ (ಪ್ರಾಣಿಗಳ ವಿಷಯದಲ್ಲಿ) ಚೊಕ್ಕಟ ಮಾಡಲು] ನಾಲಿಗೆಯಿಂದ ಸವರು.
  2. ನೆಕ್ಕಿ ಒಳಕ್ಕೆ ಎಳೆದುಕೊ; ನೆಕ್ಕಿಹಾಕು.
  3. ನೆಕ್ಕಿ – ಒಂದು ರೂಪಕ್ಕೆ ಯಾ ಸ್ಥಿತಿಗೆ ತರು: licked it all up ಪೂರ್ತಿ ನೆಕ್ಕಿಹಾಕಿತು. licked it clean ನೆಕ್ಕಿ ಚೊಕ್ಕಟ ಮಾಡಿತು.
  4. (ಅಲೆ, ಜ್ವಾಲೆ, ಮೊದಲಾದವುಗಳ ವಿಷಯದಲ್ಲಿ) ಮುಟ್ಟಾಡು; ಮೇಲ್ಮೈ ಮೇಲೆ ಮೃದುವಾಗಿ, ಹಗುರವಾಗಿ – ಚಲಿಸು, ಆಡು.
  5. (ಜ್ವಾಲೆಯ ವಿಷಯದಲ್ಲಿ) ಮುಂದುವರಿಯುತ್ತ ಕಬಳಿಸಿ ಬಿಡು; ಕಬಳಿಸುತ್ತಾ ಸರಿ.
  6. (ಅಶಿಷ್ಟ) (ಒಬ್ಬನನ್ನು) ಚಚ್ಚು; ಜಡಿ; ಸದೆಬಡಿ.
  7. (ಅಶಿಷ್ಟ) (ಒಬ್ಬನ) (ದೋಷ ಮೊದಲಾದವನ್ನು) ಹೊಡೆದೋಡಿಸು.
  8. (ಅಶಿಷ್ಟ) (ಕಾಳಗದಲ್ಲಿ, ಸ್ಪರ್ಧೆಯಲ್ಲಿ) ಸೋಲಿಸು; ಗೆಲ್ಲು; ಮೀರಿಸು; ಮೇಲಾಗು.
  9. (ಅಶಿಷ್ಟ) ಬುದ್ಧಿಗೆ – ಎಟುಕದಿರು, ನಿಲುಕದಿರು; ತಲೆಗೆ ಹತ್ತದಿರು; ಅರ್ಥವಾಗದಿರು: this licks me ಇದು ನನ್ನ ಬುದ್ಧಿಗೆ ಮೀರಿದ್ದು.
ಅಕರ್ಮಕ ಕ್ರಿಯಾಪದ

(ಅಶಿಷ್ಟ) ಬೇಗ ಹೋಗು; ತ್ವರೆ ಮಾಡು: as hard as he could lick (ಅವನ) ಕೈಲಾದಷ್ಟು ವೇಗದಿಂದ ಹೋಗುತ್ತ.

ಪದಗುಚ್ಛ
  1. lick off ನೆಕ್ಕಿ ಮುಗಿಸು.
  2. lick up ನೆಕ್ಕಿ – ಹೀರು, ಗ್ರಹಿಸು, ಸೆಳೆದುಕೊ.
ನುಡಿಗಟ್ಟು
  1. lick a person’s boots (or shoes) ಇನ್ನೊಬ್ಬನ ಕಾಲನ್ನು, ಎಕ್ಕಡವನ್ನು – ನೆಕ್ಕು; ಅತಿ ದೈನ್ಯದಿಂದ ನರ್ತಿಸು; ದಾಸಾನುದಾಸನಾಗಿ ನಡೆದುಕೊ.
  2. lick one’s lips (or chops)
    1. (ಆಹಾರದ ರುಚಿ ಹತ್ತಿ ಯಾ ನಿರೀಕ್ಷಣೆಯಿಂದ) ತುಟಿ ಚಪ್ಪರಿಸು; ತುಟಿ ನೆಕ್ಕಿಕೊ; ನಾಲಿಗೆಯಿಂದ ತುಟಿ ಸವರಿಕೊ.
    2. (ತನ್ನ) ತೃಪ್ತಿಯನ್ನು, ಸಮಾಧಾನವನ್ನು ತೋರಿಸು.
  3. lick one’s wounds ಸೋತು ತೆಪ್ಪಗೆ ಕುಳಿತುಕೊ; ಪರಾಭವದಿಂದ ಮೂಲೆ ಹಿಡಿ.
  4. lick into shape ಸರಿಯಾದ ರೂಪ ಕೊಡು; ನೋಡಲು ತಕ್ಕಂತೆ ಯಾ ಕೆಲಸಕ್ಕೆ ಸಮರ್ಥವಾಗುವಂತೆ ಮಾಡು.
  5. licks creation ಎಲ್ಲವನ್ನೂ ಮೀರಿಸಿದೆ.
  6. lick the dust ಮಣ್ಣು ಮುಕ್ಕು; ಬಿದ್ದು ಹೋಗು; ಸೋತು ಹೋಗು.