See also 2let  3let  4let
1let ಲೆಟ್‍
ಕ್ರಿಯಾಪದ

(ವರ್ತಮಾನ ಕೃದಂತ letting, ಭೂತರೂಪ ಮತ್ತು ಭೂತಕೃದಂತ let).

ಸಕರ್ಮಕ ಕ್ರಿಯಾಪದ
  1. ಎಡೆಗೊಡು; ಅವಕಾಶಕೊಡು; ಆಸ್ಪದಗೊಡು: we let them go ನಾವು ಅವರನ್ನು ಹೋಗಗೊಟ್ಟೆವು.
  2. ಆಗಿಸು; ಆಗಮಾಡು; ಉಂಟುಮಾಡು; ಆಗುವಂತೆ ಮಾಡು: let me know ನನಗೆ – ತಿಳಿಸು, ತಿಳಿಯಪಡಿಸು, ತಿಳಿಯಹೇಳು, ತಿಳಿಯುವಂತೆ ಮಾಡು. let it be known ತಿಳಿಯುವಂತಾಗಲಿ; ತಿಳಿಯಪಡಿಸಲಿ.
  3. ಒಳಕ್ಕೆ ಬಿಡು; ಹೋಗಗೊಡು; ಪ್ರವೇಶಗೊಳಿಸು: let him into the house ಅವನನ್ನು ಮನೆಯೊಳಕ್ಕೆ ಬರಗೊಡು. let yourself in ಒಳ ಹೊಗು; ಪ್ರವೇಶಿಸು.
  4. (ರಹಸ್ಯ, ಗುಟ್ಟು, ಮೊದಲಾದವನ್ನು) ತಿಳಿಯಪಡಿಸು; ಹೊರಗೆಡಹು; ರಟ್ಟುಮಾಡು; ಬಹಿರಂಗ ಮಾಡು.
  5. ಒಂದರೊಳಗಿಡು; ಒಂದರಲ್ಲಿ ಹುದುಗಿಸು.
  6. (ಬ್ರಿಟಿಷ್‍ ಪ್ರಯೋಗ) (ಕೋಣೆಗಳು, ಭೂಮಿ, ಮೊದಲಾದವನ್ನು) ಬಾಡಿಗೆಗೆ ಕೊಡು: the house was let to the new tenant for a year ಮನೆಯನ್ನು ಹೊಸ ಬಾಡಿಗೆದಾರನಿಗೆ ಒಂದು ವರ್ಷ ಬಾಡಿಗೆಗೆ ಕೊಡಲಾಯಿತು.
  7. (ದ್ರವವನ್ನು, ಗಾಳಿಯನ್ನು) ಹರಿಯಬಿಡು; ಹರಿಸು; ಹರಿಯಿಸು; ಹರಿಯಲು ಯಾ ಹರಿದು ಹೋಗಲು – ಬಿಡು, ಅವಕಾಶ ಕಲ್ಪಿಸು, ಎಡೆಗೊಡು: let blood ರಕ್ತವನ್ನು ಹರಿಯಿಸು.
  8. (ಕೆಲಸದ ಗುತ್ತಿಗೆ) ಕೊಡು; ನೀಡು; ಮಂಜೂರು ಮಾಡು.
ಸಹಾಯಕ ಕ್ರಿಯಾಪದ

ಪ್ರಥಮ ಮತ್ತು ಉತ್ತಮ ಪುರುಷಗಳ ವಿಧ್ಯರ್ಥಕ ಕ್ರಿಯಾಪದಗಳಿಗೆ ಸಹಾಯಕವಾಗಿ ಪ್ರಯೋಗ:

  1. ಸೂಚನೆಗಳಲ್ಲಿ ಯಾ ಪ್ರೇರಣೆಗಳಲ್ಲಿ: let us pray ನಾವು ಪ್ರಾರ್ಥನೆ ಮಾಡೋಣ. let us try ಪ್ರಯತ್ನ ಮಾಡೋಣ.
  2. ಕೋರಿಕೆ ಯಾ ಆಜ್ಞೆಗಳಲ್ಲಿ: let there be light ಬೆಳಕು ಆಗಲಿ. let it be done at once ಅದನ್ನು ಕೂಡಲೇ ಮಾಡಬೇಕು.
  3. ಸ್ವೀಕೃತ ಕಲ್ಪನೆಗಳಲ್ಲಿ ಯಾ ಊಹೆಗಳಲ್ಲಿ: let AB be equal to CD. AB ಯು CDಗೆ ಸಮಾನವಾಗಿರಲಿ.
  4. ಅನುಮತಿ ಯಾ ಅವಕಾಶ ನೀಡುವಾಗ: let him do it ಅವನು ಅದನ್ನು ಮಾಡಲು ಬಿಡು.
  5. ಪ್ರತಿಭಟನೆ ಯಾ ಸವಾಲಿನಲ್ಲಿ: let him do his worst ಅವನು ತನ್ನ ಕೈಲಾದಷ್ಟು ಕೆಡಕು ಮಾಡಲಿ (ನೋಡೋಣ).
ಅಕರ್ಮಕ ಕ್ರಿಯಾಪದ

ಬಾಡಿಗೆಗೆ ಹೋಗು; ಬಾಡಿಗೆ – ಗಳಿಸು, ತರು: the rooms let well ಕೊಠಡಿಗಳು ಒಳ್ಳೆಯ ಬಾಡಿಗೆ ತರುತ್ತವೆ.

ನುಡಿಗಟ್ಟು
  1. let alone
    1. (ಆ ಅಂಶವನ್ನು) ಹೇಳದಿದ್ದರೂ; ಹೇಳದೆ ಬಿಟ್ಟರೂ; ಗಣನೆಗೆ ತೆಗೆದುಕೊಳ್ಳದಿದ್ದರೂ: has he the boldness, let alone the skill for it? ಅದಕ್ಕೆ ಬೇಕಾದ ನಿಪುಣತೆ ಹಾಗಿರಲಿ, ಕುಶಲತೆಯ ಮಾತಿರಲಿ (ಯಾ ಮಾತು ಹೋಗಲಿ ಯಾ ಮಾತು ಅಂತಿರಲಿ), ಧೈರ್ಯವಾದರೂ ಅವನಿಗಿದೆಯೇ?
    2. = ನುಡಿಗಟ್ಟು \((2)\).
  2. let be ಗೊಡವೆಗೆ, ಗೋಜಿಗೆ, ತಂಟೆಗೆ – ಹೋಗದಿರು, ಕೈ ಹಾಕದಿರು; ಅವನ ಯಾ ಅದರ ಪಾಡಿಗೆ ಅವನನ್ನು ಯಾ ಅದನ್ನು ಬಿಟ್ಟುಬಿಡು; ಅವನಷ್ಟಕ್ಕವನನ್ನು ಯಾ ಅದರಷ್ಟಕ್ಕದನ್ನು ಬಿಟ್ಟುಬಿಡು.
  3. let down
    1. ಇಳಿಸು; ಕೆಳಗಿಳಿಸು; ಕೆಳಕ್ಕೆ ಬಿಡು.
    2. (ಸಮಯದಲ್ಲಿ) ಬೆಂಬಲಿಸದಿರು; ಕೈಬಿಡು; ಕೈಕೊಡು; (ಕೆಳಕ್ಕೆ) ತಳ್ಳಿಬಿಡು.
    3. ನಿರಾಶೆಗೊಳಿಸು; ತೃಪ್ತಿದಾಯಕವಾಗದಿರು; ಆಶಾಭಂಗವುಂಟುಮಾಡು.
    4. (ಉಡುಪನ್ನು) ಉದ್ದಕ್ಕೆ ಬಿಡು; (ಮಡಿಸದೆ, ಎತ್ತಿ ಕಟ್ಟದೆ) ಕೆಳಕ್ಕೆ ಬಿಡು.
    5. (ಟೈರಿನ) ಗಾಳಿ ಬಿಡು; ಗಾಳಿ ಬರಿದು ಮಾಡು.
  4. let down gently (ಹಠಾತ್ತಾಗಿ ತೊರೆಯದೆ ಯಾ ಅಪಮಾನ ಮಾಡದೆ) ನಿಧಾನವಾಗಿ ಯಾ ಕ್ರಮೇಣ ಕೈಬಿಡು.
  5. let drop = ನುಡಿಗಟ್ಟು \((6)\).
  6. let fall
    1. (ಬೇಕೆಂದು ಯಾ ಕೈ ತಪ್ಪಿ) ಬೀಳಗೊಡು; ಬೀಳಿಸು.
    2. (ಸೂಚನೆಯನ್ನು ಯಾ ಅರ್ಥಪೂರ್ಣವಾದ ಮಾತನ್ನು, ಬೇಕೆಂದೇ ಯಾ ಆಕಸ್ಮಿಕವಾಗಿ) ಹೊರಗೆಡವು; ಹೊರಬೀಳಿಸು.
    3. (ಜ್ಯಾಮಿತಿ) ಒಂದು ಸರಳರೇಖೆಯ ಮೇಲೆ ಹೊರ ಬಿಂದುವೊಂದರಿಂದ ಒಂದು ಲಂಬ ರೇಖೆಯನ್ನು ಎಳೆ.
  7. let $^2$fly.
    1. (ಕ್ಷಿಪಣಿ ಮೊದಲಾದವನ್ನು) ಹಾರಿಬಿಡು; ಹಾರಿಸು; ಉಡಾಯಿಸು; ಉಡಾವಣೆ ಮಾಡು.
    2. (ಗುಂಡು, ಬಾಣ, ಮೊದಲಾದವನ್ನು) ಹೊಡೆ; ಹಾರಿಸು; ಎಸೆ; ಬಿಡು.
    3. ನಿಷ್ಠುರವಾಗಿ ಮಾತನಾಡು; ಕಟುವಾಗಿ ಮಾತನಾಡು.
  8. let go
    1. ಹೋಗಗೊಡು; ಹೋಗಬಿಡು.
    2. ಬಿಡುಗಡೆ ಮಾಡು, ಸ್ವತಂತ್ರಗೊಳಿಸು.
    3. ಹಿಡಿತ ಕಳೆದುಕೊ.
    4. ಕೈಬಿಡು; ಹಿಡಿತ ಬಿಡು ಯಾ ತ್ಯಜಿಸು.
    5. (ಮನಸ್ಸಿನಿಂದ) ತೊಲಗಿಸು; (ಒಂದರ ಬಗ್ಗೆ) ಚಿಂತಿಸುವುದನ್ನು ಯಾ ಮಾತಾಡುವುದನ್ನು ನಿಲ್ಲಿಸು.
    6. ತಡೆಯನ್ನು ತೆಗೆ; ನಿಯಂತ್ರಣವನ್ನು ತೆಗೆದು ಹಾಕು.
  9. let in
    1. ಒಳಕ್ಕೆ ಬಿಡು; ಬಾಗಿಲು ತೆರೆ; ಪ್ರವೇಶ ಮಾಡಿಸು; ಹೋಗಲು ಯಾ ಬರಲು ಅವಕಾಶ ಕೊಡು: let in a flood of light (ಬಾಗಿಲು ಮೊದಲಾದವನ್ನು ತೆರೆದು) ಬೆಳಕಿನ ಪ್ರವಾಹವನ್ನು ಒಳಕ್ಕೆ ಬಿಡು, ಹರಿಯಿಸು. this would let in all sorts of evils ಇದರಿಂದ ಎಲ್ಲ ಬಗೆಯ ಅನರ್ಥಗಳಿಗೂ ಬಾಗಿಲು ತೆರೆದಂತಾಗುತ್ತದೆ.
    2. (ಒಂದು ವಸ್ತುವನ್ನು) ಇನ್ನೊಂದರಲ್ಲಿ ನಾಟಿಸು, ಹುದುಗಿಸು.
  10. let (oneself or person) in for (ತನ್ನನ್ನೇ ಯಾ ವ್ಯಕ್ತಿಯನ್ನು) (ನಷ್ಟಕ್ಕೆ ಯಾ ಕಷ್ಟದಲ್ಲಿ) ಸಿಕ್ಕಿಸು; ಸಿಕ್ಕಿಬೀಳಿಸು.
  11. let (person) in on (ವ್ಯಕ್ತಿಗೆ ತನ್ನೊಂದಿಗೆ) ಸವಲತ್ತು, ಸುದ್ದಿ, ಮೊದಲಾದವುಗಳನ್ನು ಹಂಚಿಕೊಳ್ಳಲು ಅವಕಾಶ ಕೊಡು.
  12. let into
    1. ಒಳಕ್ಕೆ ಬಿಡು.
    2. ಒಂದನ್ನು (ಇನ್ನೊಂದರ ಮೇಲ್ಮೈಯಲ್ಲಿ) – ನಾಟಿಸು, ಸೇರಿಸು, ಹುದುಗಿಸು.
    3. (ಗುಟ್ಟು ಮೊದಲಾದವನ್ನು ಒಬ್ಬನಿಗೆ) ತಿಳಿಸು; (ಒಬ್ಬನನ್ನು) ಏಕಾಂತಕ್ಕೆ ತೆಗೆದುಕೊ.
    4. (ಏಟುಗಳಿಂದಲೋ, ಮಾತುಗಳಿಂದಲೋ) ಮೇಲೆ ಬೀಳು; ಮೇಲೆರಗು; ಹಲ್ಲೆ ಮಾಡು; ಆಕ್ರಮಣ ಮಾಡು.
  13. let loose (ನಾಯಿ, ರೋಷ, ಹುಚ್ಚ, ಮೊದಲಾದವನ್ನು) ಮುಕ್ತಗೊಳಿಸು; ನಿರ್ಬಂಧ ತೆಗೆದು ಸ್ವೇಚ್ಛೆಯಾಗಿ ಬಿಡು; ಕಟ್ಟು ಕಳಚಿ ಯಾ ಹರಿದು ಬಿಡು; (ನಾಯಿಯನ್ನು) ಸರಪಣಿ ಬಿಚ್ಚಿ ಬಿಡು.
  14. let me $^1$see (ಉತ್ತರ ಹೇಳುವ, ವಿವರ ಒದಗಿಸುವ ಮೊದಲು ಯಾ ತಾನು ಹೇಳಲಿರುವುದನ್ನು ಪುನರಾಲೋಚಿಸಬೇಕಾಗಬಹುದೆಂದು ಸೂಚಿಸುತ್ತಾ ಕಾಲಾವಕಾಶ ಬೇಕಾದಾಗ ಹೇಳುವ ಮಾತಾಗಿ) ಸ್ವ ಇರು – ನೋಡುತ್ತೇನೆ, ಯೋಚಿಸುತ್ತೇನೆ; ಸ್ವ ಯೋಚಿಸಿ ಹೇಳುತ್ತೇನೆ; ತಾಳು; ತಡೆ; ಇರು.
  15. let off
    1. (ಬಂದೂಕು, ಪಟಾಕಿ, ಹಾಸ್ಯ ಚಟಾಕಿ) ಹಾರಿಸು; ಹೊಡೆ.
    2. (ಬಾಂಬು ಮೊದಲಾದವನ್ನು) ಹಾರಿಸು; ಸಿಡಿಸು.
    3. (ವಾಹನ ಮೊದಲಾದವುಗಳಿಂದ) ಇಳಿಯಲು ಅವಕಾಶ ಕೊಡು; ಇಳಿಸು.
    4. (ದ್ರವ, ಅನಿಲ, ಆವಿ, ಮೊದಲಾದವನ್ನು) ಹೋಗವಿಡು; ಹರಿಯಬಿಡು.
    5. (ವ್ಯಕ್ತಿಯನ್ನು ದಂಡಿಸದೆ) ಮನ್ನಿಸು; ಕ್ಷಮಿಸು; ಮಾಫಿ ಮಾಡು.
    6. (ಬ್ರಿಟಿಷ್‍ ಪ್ರಯೋಗ) ದಂಡಿಸದೆ, ಬಲಾತ್ಕಾರ ಮಾಡದೆ, ಲಘುವಾದ ಶಿಕ್ಷೆಕೊಟ್ಟು – ಬಿಟ್ಟುಬಿಡು.
    7. (ಮುಖ್ಯವಾಗಿ ಕ್ರಿಕೆಟ್ಟಿನಲ್ಲಿ ಸಿಕ್ಕಿದ್ದ ಕ್ಯಾಚು ಹಿಡಿಯದೆ ಮೊದಲಾದ ಕಾರಣಗಳಿಂದ ಔಟಾಗಬೇಕಿದ್ದ ಸಂದರ್ಭದಿಂದ) ಪಾರು ಮಾಡು; ತಪ್ಪಿಸಿಕೊಳ್ಳುವ ಅವಕಾಶ ಕೊಡು.
    8. (ಮನೆಯ ಭಾಗ ಮೊದಲಾದವನ್ನು) ಬಾಡಿಗೆಗೆ ಕೊಡು.
  16. let off $^1$steam
    1. ನಿರೋಧಿಸಲ್ಪಟ್ಟ ಶಕ್ತಿಯನ್ನು ಹೊರಬಿಡು, ವಿಸರ್ಜಿಸು.
    2. ತಡೆದುಕೊಂಡಿದ್ದ ಭಾವೋದ್ರೇಕ ಹೊರಬಿಡು, ಪ್ರಕಟಿಸು.
    3. ರೇಗಾಡು; ಕೂಗಾಡು.
  17. let on (ಆಡುಮಾತು)
    1. ಗುಟ್ಟು – ರಟ್ಟು ಮಾಡು, ಹೊರಗೆಡವು.
    2. ನಟನೆ ಮಾಡು; ನಟಿಸು: let on that he had succeeded ಯಶಸ್ವಿಯಾಗಿದ್ದನೆಂದು ನಟಿಸಿದ.
  18. let oneself go
    1. (ಆ ಕ್ಷಣದ) ಉತ್ಸಾಹಕ್ಕೆ ವಶವಾಗು; ಆವೇಗಕ್ಕೆ ಒಳಗಾಗು.
    2. ಹಾಯಾಗಿರು; ಆರಾಮವಾಗಿರು; ತೊಂದರೆ ತೆಗೆದುಕೊಳ್ಳದಿರು.
    3. (ತನ್ನ ವೇಷಭೂಷಣ ಯಾ ಅಭ್ಯಾಸಗಳನ್ನು) ಅಲಕ್ಷಿಸು; ಉಪೇಕ್ಷಿಸು; ಕಡೆಗಣಿಸು; (ಅವಕ್ಕೆ) ಗಮನ ಕೊಡದಿರು.
  19. let oneself in (ಬೀಗದ ಕೈ ಮೊದಲಾದವುಗಳಿಂದ, ತಾನೇ ಬಾಗಿಲು ತೆಗೆದುಕೊಂಡು ರೂಮು, ಮನೆಗಳನ್ನು) ಒಳಹೋಗು; ಪ್ರವೇಶಿಸು.
  20. let out
    1. (ಬಾಗಿಲು ತೆರೆದು) ಹೊರಕ್ಕೆ ಬಿಡು.
    2. (ಒಬ್ಬನನ್ನು) (ಅಪರಾಧಿತ್ವದಿಂದ ಯಾ ಆರೋಪಗಳಿಂದ) ಬಿಡುಗಡೆ ಮಾಡು; ವಿಮುಕ್ತಿಗೊಳಿಸು; ಒಬ್ಬನ ಮೇಲೆ ಹೊರಿಸಿರುವ ಅಪರಾಧದ ದೂರನ್ನು ತಪ್ಪಿಸು.
    3. (ಗುಟ್ಟನ್ನು ಬಾಯಿತಪ್ಪಿ) ಬಿಟ್ಟು ಕೊಡು; ಹೇಳಿ ಬಿಡು; ಹೊರಗೆಡಹು.
    4. (ಉಡುಪನ್ನು) ಸಡಿಲಿಸು; ಸಡಿಲವಾಗಿಸು.
    5. (ಮುಖ್ಯವಾಗಿ ಹಲವಾರು ಬಾಡಿಗೆದಾರರಿಗೆ) ಬಾಡಿಗೆಗೆ ಕೊಡು.
    6. (ಕರಾರಿನ ಮೇಲೆ) ಗುತ್ತಿಗೆಗೆ ಕೊಡು.
    7. ಬಹಿರಂಗಪಡಿಸು; ಪ್ರಕಟಿಸು.
    8. (ವ್ಯಕ್ತಿ ಮೊದಲಾದವರನ್ನು) ತಪ್ಪಿಸಿಕೊಳ್ಳಲು ಬಿಟ್ಟುಬಿಡು; ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಡು.
    9. (ಕರ್ಮನಿರಪೇಕ್ಷವಾಗಿ) ಮುಷ್ಟಿಯಿಂದ – ಹೊಡೆ, ಬಡಿ, ಬಿಗಿ.
    10. ( ಅಕರ್ಮಕ ಕ್ರಿಯಾಪದ) ಹಿಮ್ಮಡಿಗಲಿಂದ – ಬಡಿ, ಅಪ್ಪಳಿಸು.
    11. ( ಅಕರ್ಮಕ ಕ್ರಿಯಾಪದ) ಬಿರುನುಡಿಗಳನ್ನಾಡು.
  21. let $^2$rip
    1. ಸಂಯಮವಿಲ್ಲದೆ ವರ್ತಿಸು, ಮುನ್ನುಗ್ಗು,ಮುಂದುವರಿ.
    2. ಜೋರಾಗಿ ಮಾತನಾಡು.
    3. (ಒಬ್ಬ ವ್ಯಕ್ತಿ ಯಾ ಒಂದು ವಸ್ತುವಿನ) ವೇಗಕ್ಕೆ ಅಡ್ಡ ಬರದಿರು; ವೇಗ ತಡೆಯದಿರು; ಮಧ್ಯೆ ಪ್ರವೇಶಿಸದಿರು;
  22. let $^1$slip
    1. ತೊಗಪಟ್ಟಿ ಕಳಚು; ಹಿಡಿದಿಟ್ಟಿರುವ ಬಾರಿನಿಂದ ಬಿಡುಗಡೆ ಮಾಡು.
    2. ಬಾಯಿತಪ್ಪಿ ನುಡಿ; ಎಚ್ಚರಿಕೆಯಿದೆ, ಅಜಾಗರೂಕತೆಯಿಂದ – ನುಡಿ.
    3. (ಸದವಕಾಶವನ್ನು) ಕಳೆದುಕೊ; ತಪ್ಪಿಸಿಕೊ; ಹಾಳು ಮಾಡಿಕೊ.
  23. let through ಮುಂದೆ ಹೋಗಲು ಬಿಡು; ಹಾಯ್ದು ಹೋಗಲು ಬಿಡು.
  24. let up (ಆಡುಮಾತು)
    1. ತೀವ್ರತೆ ತಗ್ಗು; ಬಿರುಸು ಕಡಿಮೆಯಾಗು.
    2. ಪ್ರಯತ್ನ – ಸಡಿಲಿಸು, ತಗ್ಗಿಸು, ಕಡಮೆ ಮಾಡು, ಶಿಥಿಲಗೊಳಿಸು.
  25. let well alone ಅನಾವಶ್ಯಕವಾಗಿ – ಕೈ ಹಾಕಬೇಡ, ಗೋಜಿಗೆ ಹೋಗಬೇಡ; ಅದರಷ್ಟಕ್ಕೆ ಅದನ್ನು ಬಿಡು.
  26. to let (ಮನೆ ಮೊದಲಾದವುಗಳ ವಿಷಯದಲ್ಲಿ) ಬಾಡಿಗೆಗೆ (ದೊರೆಯುತ್ತದೆ).