See also 2less  3less  4less
1less ಲೆಸ್‍
ಗುಣವಾಚಕ
  1. (ಗಾತ್ರ, ಪ್ರಮಾಣ, ಅವಧಿ, ಸಂಖ್ಯೆ, ಮೊದಲಾದವುಗಳ ಅಳತೆಯಲ್ಲಿ ಇನ್ನೊಂದಕ್ಕಿಂತ) ಸಣ್ಣ; ಚಿಕ್ಕ; ಕಡಿಮೆಯ; ಕಿರಿಯ (greater ಗೆ ವಿರುದ್ಧ ಪದ): in a less degree ಇನ್ನೂ ಕಡಿಮೆ ಮಟ್ಟದಲ್ಲಿ, ಪ್ರಮಾಣದಲ್ಲಿ.
  2. ಇನ್ನೂ ಕಡಿಮೆ ಅಳತೆಯ; ಇನ್ನೊಂದರಷ್ಟಿಲ್ಲದ (moreಗೆ ವಿರುದ್ಧ ಪದ): find less difficulty (ಅದಕ್ಕಿಂತ) ಇದರದು ಕಡಿಮೆ ಕಷ್ಟ. eat less meat ಮಾಂಸ ಇನ್ನೂ ಕಡಿಮೆ ತಿನ್ನು.
  3. (ವಿವಾದಾಸ್ಪದ ಪ್ರಯೋಗ) ಕಡಮೆ ಸಂಖ್ಯೆಯ: eat less biscuits ಬಿಸ್ಕತ್ತು ಕಡಮೆ ತಿನ್ನು.
  4. (ದರ್ಜೆ ಮೊದಲಾದವುಗಳ ವಿಷಯದಲ್ಲಿ) ಕೆಳ; ಕಡಮೆಯ; ಕಿರಿಯ; ಕಡಿಮೆ ದರ್ಜೆಯ; ಕಡಮೆ ವಯಸ್ಸಿನ: no less a person than X ಸಣ್ಣಪುಟ್ಟ ಮನುಷ್ಯರಲ್ಲ, X ರಷ್ಟು ದೊಡ್ಡ ವ್ಯಕ್ತಿ. James the Less ಕಿರಿಯ ಜೇಮ್ಸ್‍; ಏಸುವಿನ ಹನ್ನೆರಡು ಶಿಷ್ಯರಲ್ಲಿ, ಅಲೆಯಸನ ಮಗ ಜೇಮ್ಸ್‍.
ನುಡಿಗಟ್ಟು

to be less ಕುಗ್ಗು; ಬಡವಾಗು; ಕೃಶವಾಗು: may your shadow never be less ನೀನು ಎಂದಿಗೂ ಬಡವಾಗದಿರು; ದೇವರು ನಿನ್ನನ್ನು ಎಂದಿಗೂ ಬಡವಾಗದಂತೆ ಇಡಲಿ.