See also 1left  2left  4left
3left ಲೆಹ್ಟ್‍
ನಾಮವಾಚಕ
  1. ಎಡಗೈ; ವಾಮಹಸ್ತ.
  2. ಎಡಪಕ್ಕ; ಎಡಗಡೆ; ಸವ್ಯ; ವಾಮಭಾಗ.
  3. ಎಡದಿಕ್ಕು.
  4. (ಮುಷ್ಟಿಯುದ್ಧ)
    1. ಎಡಗೈ.
    2. ಎಡಗೈ – ಹೊಡೆತ, ಪೆಟ್ಟು, ಗುದ್ದು; ವಾಮಹಸ್ತಾಘಾತ.
  5. (ರಾಜನೀತಿಶಾಸ್ತ್ರ)
    1. ವಾಮಪಕ್ಷ; ತೀವ್ರ ಸಮಾಜವಾದಿ ಗುಂಪು ಯಾ ವಿಭಾಗ.
    2. ವಾಮಪಕ್ಷೀಯರು; ತೀವ್ರಗಾಮಿಗಳು; (ಮೊದಲಿಗೆ ಯೂರೋಪಿನ ಕೆಲವು ಶಾಸನಸಭೆಗಳಲ್ಲಿ ಸಭಾಧ್ಯಕ್ಷನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಿದ್ದ) ತೀವ್ರ ಸುಧಾರಣಾವಾದಿಗಳ ಗುಂಪು.
  6. (ಯಾವುದೇ ಗುಂಪಿನ) ಪ್ರಗತಿಶೀಲರು; ಪುರೋಗಾಮಿಗಳು; ಸುಧಾರಣಾವಾದಿಗಳು; ನವೀನರು; ನವಪಂಥೀಯರು; ಮುಂದುವರೆದವರು ಯಾ ಹೊಸತನ್ನು ತರುವವರು.
  7. ಎಡರಂಗ; ನಾಟಕಶಾಲೆಯಲ್ಲಿ ಪ್ರೇಕ್ಷಕರಿಗೆ ಎಡಭಾಗದಲ್ಲಿರುವ ರಂಗದ ಪ್ರದೇಶ.
  8. (ಮುಖ್ಯವಾಗಿ ಕವಾಯತಿನ ನಡಿಗೆಯಲ್ಲಿ) ಎಡಗಾಲು.
  9. (ಸೈನ್ಯದ) ಎಡಭಾಗ; ವಾಮಕಕ್ಷೆ.