See also 2left  3left  4left
1left ಲೆಹ್ಟ್‍
ಗುಣವಾಚಕ
  1. ಎಡ; ವಾಮ; ಎಡದ; ಎಡಪಕ್ಕದ; ಎಡಮಗ್ಗುಲ; ಎಡಗಡೆಯ; ಎಡಗಡೆಯಲ್ಲಿರುವ; ಎಡಬದಿಯ; ಎಡಕಕ್ಷೆಯ; ಸವ್ಯ; ವಾಮಪಾರ್ಶ್ವದ.
  2. (ಒಬ್ಬ ವ್ಯಕ್ತಿಯ ಯಾ ವಸ್ತುವಿನ) ಎಡಕ್ಕಿರುವ; ಎಡಬದಿಯ; ಎಡಗೈ – ಹತ್ತಿರದ, ಎದುರಿಗಿರುವ.
  3. (Left ಎಂದೂ ಪ್ರಯೋಗ) (ರಾಜನೀತಿಶಾಸ್ತ್ರ) ಎಡಪಕ್ಷದ; ವಾಮಪಕ್ಷದ; ವಾಮಪಂಥದ.
ಪದಗುಚ್ಛ
  1. left $^4$bower. ಅದೇ ಬಣ್ಣದ ಬೇರೆ ಗುಲಾಮ.
  2. on the left hand of ಎಡಭಾಗದಲ್ಲಿ; ವಾಮಪಾರ್ಶ್ವದಲ್ಲಿ; ಎಡಗಡೆ.
ನುಡಿಗಟ್ಟು
  1. have two left feet ಒಡ್ಡೊಡ್ಡಾಗಿರು; ಅಂದಗೆಟ್ಟಿರು.
  2. marry with the left hand ವಾಮಪಾಣಿಗ್ರಹಣ, ವಾಮವಿವಾಹ ಮಾಡಿಕೊ; ವಿಲೋಮ ಮದುವೆ ಮಾಡಿಕೊ; (ಶ್ರೀಮಂತ ಮೊದಲಾದವರ ವಿಷಯದಲ್ಲಿ) ತನ್ನ ಪದವಿ, ವಂಶ, ಮೊದಲಾದವುಗಳಿಗೆ ಸಲ್ಲದ ಕೆಳ ಅಂತಸ್ತಿನ ಹೆಣ್ಣನ್ನು ಮದುವೆ ಮಾಡಿಕೊ.
  3. over the left shoulder (ವಿರಳ ಪ್ರಯೋಗ) (ಅಶಿಷ್ಟ) ತದ್ವಿರುದ್ಧಾರ್ಥದ; ಹೇಳಿದುದಕ್ಕೆ ವಿರುದ್ಧವಾಗಿ – ತಿಳಿದುಕೊಳ್ಳಬೇಕಾದ ಯಾ ಅರ್ಥ ಮಾಡಬೇಕಾದ.