See also 1leak
2leak ಲೀಕ್‍
ಸಕರ್ಮಕ ಕ್ರಿಯಾಪದ
  1. (ದ್ರವ ಯಾ ಅನಿಲವನ್ನು) ಸೋರಿಸು; ಹೊರ ಸೋರುವಂತೆ ಮಾಡು.
  2. (ದ್ರವ ಯಾ ಅನಿಲವನ್ನು ಕಂಡಿಯ ಮೂಲಕ) ಒಳ – ತೂರಿಸು, ನುಗ್ಗಿಸು.
  3. (ಗುಟ್ಟನ್ನು, ಗುಟ್ಟಿನ ಸಮಾಚಾರವನ್ನು) ಉದ್ದೇಶಪೂರ್ವಕವಾಗಿ ಹೊರಗೆಡಹು, ಬಯಲುಮಾಡು, ರಟ್ಟು ಮಾಡು, ಬಿಟ್ಟುಕೊಡು, ಹೊರಗೆಹಾಕು.
ಅಕರ್ಮಕ ಕ್ರಿಯಾಪದ
  1. (ದ್ರವ, ಅನಿಲ, ಮೊದಲಾದವುಗಳ ವಿಷಯದಲ್ಲಿ) ತೂತಿನ ಮೂಲಕ
    1. ಸೋರು; ಸ್ರವಿಸು; ಹೊರಹೋಗು; ಹೊರಬರು.
    2. ಒಳತೂರು; ಒಳನುಗ್ಗು.
  2. (ಗುಟ್ಟು, ಗುಟ್ಟಿನ ಸಮಾಚಾರಗಳ ವಿಷಯದಲ್ಲಿ) ಬಯಲಾಗು; ಹೊರಬೀಳು; ಹೊರಬರು; ರಟ್ಟಾಗು.
ಪದಗುಚ್ಛ

leak out (ಗುಟ್ಟು ಮೊದಲಾದವುಗಳ ವಿಷಯದಲ್ಲಿ) = 2leak ಅಕರ್ಮಕ ಕ್ರಿಯಾಪದ \((2)\).