See also 2leak
1leak ಲೀಕ್‍
ನಾಮವಾಚಕ
  1. (ಹಳೆಯದಾದುದರಿಂದಲೋ, ಒಡೆದುದರಿಂದಲೋ ಪಾತ್ರೆ, ಕೊಳವೆ, ಕಾಲುವೆ, ಏರಿ, ಮೊದಲಾದವುಗಳಲ್ಲಿ ಆಗುವ, ದ್ರವ ಯಾ ಅನಿಲ ಹೊರಕ್ಕೆ ಹರಿಯುವ, ಸೋರುವ, ಒಳತೂರುವ) ಒಡಕು; ಬಿರುಕು; ಸಂದು; ತೂತು; ರಂಧ್ರ; ಸೋರುಗಂಡಿ; ತೂರುಗಂಡಿ.
  2. ಸೋರಿಕೆ; ಸೋರುದ್ರವ; ರಂಧ್ರದ ಮೂಲಕ ಒಳಕ್ಕೆ ಯಾ ಹೊರಕ್ಕೆ ಸೋರಿ ಹೋಗುವ, ಹರಿಯುವ ಪದಾರ್ಥ.
  3. ಸೋರಿಕೆ; ಸೋರುವುದು; ಸೋರುವಿಕೆ.
  4. ವಿದ್ಯುತ್ಸೋರಿಕೆ; ವಿದ್ಯುದಾವೇಶ ಹೀಗೆ ಸೋರುವುದು. 5 ಸೋರಿಕೆ ವಿದ್ಯುತ್ತು; ಸೋರಿಹೋಗುವ ವಿದ್ಯುತ್ತು.
  5. ಗುಟ್ಟು ಸೋರಿಕೆ; ರಹಸ್ಯ ಸೋರಿಕೆ; ಗೋಪ್ಯವಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹೊರಗೆಡಹುವುದು.
ಪದಗುಚ್ಛ

spring a leak ತೂತುಬೀಳು; ತೂತಾಗು; ಸೋರುಗಂಡಿ ಬೀಳು; ತೂರುಗಂಡಿ ಬಿದ್ದಿರು.

ನುಡಿಗಟ್ಟು

have (or take) a leak (ಅಶಿಷ್ಟ) ಉಚ್ಚೆ ಹೊಯ್ಯು; ಮೂತ್ರ ವಿಸರ್ಜನೆ ಮಾಡು.