See also 1lamp
2lamp ಲ್ಯಾಂಪ್‍
ಸಕರ್ಮಕ ಕ್ರಿಯಾಪದ
  1. ದೀಪವಿಡು; ದೀಪಗಳನ್ನು – ಹಾಕು, ಒದಗಿಸು; to lamp the church ಚರ್ಚಿಗೆ ದೀಪ ಒದಗಿಸಲು.
  2. (ದೀಪದಿಂದಲೋ ಎಂಬಂತೆ) ಬೆಳಗು; ಬೆಳಗಿಸು; ಪ್ರಕಾಶಗೊಳಿಸು; ಬೆಳಕು ಚೆಲ್ಲು; ಪ್ರಕಾಶಬೀರು; ಕಾಂತಿಬೀರು; the falling stars lamping the red horizon ಬೀಳುತ್ತಿರುವ ನಕ್ಷತ್ರಗಳು ಕೆಂಪು ಗಗನದಂಚನ್ನು ಬೆಳಗಿಸುತ್ತಾ.
  3. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ನೋಡು: nobody even lamped its number ಯಾರೂ ಅದರ ಸಂಖ್ಯೆಯನ್ನು ಕೂಡ ನೋಡಲಿಲ್ಲ.
ಅಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) ಬೆಳಗು; ಹೊಳೆ; ಪ್ರಕಾಶಿಸು; ಬೆಳಕು ಬೀರು: an evil fire out of their eyes came lamping ಅವರ ಕಣ್ಣುಗಳಿಂದ ಒಂದು ಕೆಟ್ಟ ಬೆಂಕಿ ಹೊಳೆಯುತ್ತಾ ಹೊಮ್ಮಿತು.