See also 2lamp
1lamp ಲ್ಯಾಂಪ್‍
ನಾಮವಾಚಕ
  1. ದೀಪ; ಲ್ಯಾಂಪು; ಸತತವಾಗಿ ಬೆಳಕನ್ನು ಒದಗಿಸುವ ಸಾಧನ, ಮುಖ್ಯವಾಗಿ:
    1. ವಿದ್ಯುದ್ದೀಪ (ಸಾಮಾನ್ಯವಾಗಿ ಹೋಲ್ಡರು ಮತ್ತು ಷೇಡು ಯಾ ಹೊದಿಕೆಯುಳ್ಳದ್ದು): bedside lamp ಹಾಸಿಗೆ ಮಗ್ಗುಲಿನ ಲ್ಯಾಂಪು.
    2. ಎಣ್ಣೆದೀಪ; ಎಣ್ಣೆ, ಬತ್ತಿ ಕೂಡಿದ ದೀವಿಗೆ, ಸೊಡರು.
    3. ಉರಿವ ಮೇಣದ ಬತ್ತಿ, ಅನಿಲಧಾರೆ, ಬಿಳಿಗಾವು ತಂತಿ ಯಾ ಇತರ ಬೆಳಕು ನೀಡುವ ವಸ್ತುವನ್ನು ಇರಿಸಿರುವ, ಗಾಜು ಮೊದಲಾದಪಾರದರ್ಶಕ ಬುರುಡೆ, ಪಾತ್ರೆ.
    4. ಹಲವಾರು ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಬಳಸುವ, (ಮುಖ್ಯವಾಗಿ ನೇರಳಾತೀತ ಯಾ ರಕ್ತಾತೀತ ವಿಕಿರಣವನ್ನು) ಹೊರಸೂಸುವ ಸಾಧನ.
  2. ಜ್ಞಾನ ದೀವಿಗೆ; ಅಧ್ಯಾತ್ಮಜ್ಯೋತಿ; ಆಶಾಕಿರಣ; ಜ್ಞಾನದೀಪ; ಆಧ್ಯಾತ್ಮಿಕ ಯಾ ಬೌದ್ಧಿಕ ಸ್ಫೂರ್ತಿಯ ನೆಲೆ, ಅಕರ.
  3. (ಕಾವ್ಯಪ್ರಯೋಗ) ಸೂರ್ಯ, ಚಂದ್ರ ಯಾ ನಕ್ಷತ್ರ.
ನುಡಿಗಟ್ಟು

smell of the lamp

  1. (ಬರೆಹ ಮೊದಲಾದವುಗಳ ವಿಷಯದಲ್ಲಿ) ದೀರ್ಘವ್ಯಾಸಂಗದ, ರಾತ್ರಿಯ ಓದಿನ, ನಿದ್ರೆಗೆಟ್ಟು ವ್ಯಾಸಂಗ ಮಾಡಿದ – ಚಿಹ್ನೆ ತೋರು.
  2. (ಶೈಲಿ ಮೊದಲಾದವುಗಳಲ್ಲಿ) ಪ್ರಯಾಸಪಟ್ಟು ಬರೆದಂತೆ ಕಾಣು; ತಿಣಿಕಿ ಬರೆದಂತಿರು.