See also 2hug
1hug ಹಗ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಪ್ರೀತಿಯಿಂದ) ತೋಳುಗಳಲ್ಲಿ ಬಿಗಿದಪ್ಪಿಕೊ; ತಬ್ಬಿಕೊ; ಎದೆಗವಚಿಕೊ; ಆಲಿಂಗಿಸಿಕೊ.
  2. (ಕರಡಿಯ ವಿಷಯದಲ್ಲಿ) (ಮನುಷ್ಯ ಮೊದಲಾದವರನ್ನು ಮುಂಗಾಲುಗಳ ನಡುವೆ ಸಿಕ್ಕಿಸಿಕೊಂಡು) ಅದುಮು; ಅಮುಕು.
  3. (ಪೂರ್ವಾಗ್ರಹಗಳು ಮೊದಲಾದವುಗಳಿಗೆ ಬಿಡದೆ) ಅಂಟಿಕೊಂಡಿರು; ಕಚ್ಚಿಕೊಂಡಿರು.
  4. (ಪ್ರಾಚೀನ ಪ್ರಯೋಗ) (ಒಬ್ಬನಲ್ಲಿ) ಪ್ರೀತಿ, ಮಮತೆ – ತೋರು.
  5. (ಯಾವುದೇ ವಿಷಯದಲ್ಲಿ ಯಾ ವಿಷಯಕ್ಕಾಗಿ) ತನ್ನ ಬೆನ್ನು ತಾನೇ ತಟ್ಟಿಕೊ; ತನ್ನನ್ನು ತಾನೇ ಮೆಚ್ಚಿಕೊ; ಸ್ವಾಭಿನಂದಿಸಿಕೊ
  6. (ಕಡಲಿನ ಕರೆ, ರಸ್ತೆಯ ಅಂಚು, ಮೊದಲಾದವಕ್ಕೆ) ಅಂಟಿದಂತಿರು; ತಾಗಿದಂತಿರು; ಪಕ್ಕದಲ್ಲೇ – ಇರು ಯಾ ಹೋಗುತ್ತಿರು.