See also 1hollow  3hollow  4hollow  5hollow
2hollow ಹಾಲೋ
ಗುಣವಾಚಕ
  1. ಟೊಳ್ಳಾದ; ಪೊಳ್ಳಾದ; ಪೊಟರೆಯಾದ; ಒಳಗೆ – ಕಂಡಿಯಿರುವ, ಕುಳಿಯಿರುವ.
  2. ಬರಿದಾದ; ಖಾಲಿಯಾದ; ಒಳಗೇನೂ ಇಲ್ಲದ.
  3. ಬರಿಹೊಟ್ಟೆಯ; ಹಸಿದ: I feel absolutely hollow, let’s go and eat ನನಗೆ ತುಂಬಾ ಹಸಿವಾಗಿದೆ, ಹೋಗಿ ತಿನ್ನೋಣ.
  4. (ಧ್ವನಿವಿಜ್ಞಾನ) ತುಂಬು ಸ್ವರವಲ್ಲದ; ಕ್ಷೀಣ; ಮಂದ: a hollow voice ಕ್ಷೀಣಧ್ವನಿ.
  5. (ರೂಪಕವಾಗಿ) ಬರಿದಾದ; ಅರ್ಥಶೂನ್ಯ; ಹುರುಳಿಲ್ಲದ: a hollow victory ಹುರುಳಿಲ್ಲದ ಜಯ.
  6. (ರೂಪಕವಾಗಿ).
    1. ಖಾಲಿ; ಪೊಳ್ಳು; ಅಪ್ರಾಮಾಣಿಕ; ಕಪಟದ; ಮೋಸದ: hollow praise ಪೊಳ್ಳು, ಮೋಸದ, ಖಾಲಿ – ಹೊಗಳಿಕೆ.
    2. ಸುಳ್ಳಾ; ಹುಸಿಯಾದ: hollow promises ಸುಳ್ಳು ವಾಗ್ದಾನಗಳು.
  7. ನಿಮ್ನ; ಒಳಬಾಗಿರುವ; ಬೊಗಸೆಯಾಕಾರದಲ್ಲಿರುವ: a hollow surface ನಿಮ್ನ ತಳ.
  8. (ಕೆನ್ನೆ, ಕಣ್ಣು, ಮೊದಲಾದವುಗಳ ವಿಷಯದಲ್ಲಿ) ಕುಳಿಬಿದ್ದ; ಬತ್ತಿದ; ಒಳಸರಿದ: hollow cheeks ಕುಳಿಬಿದ್ದ ಕೆನ್ನೆಗಳು.