See also 2heroic
1heroic ಹಿ(ಹೆ)ರೋಇಕ್‍
ಗುಣವಾಚಕ
  1. (ಕಾರ್ಯಗಳ ಯಾ ಗುಣಗಳ ವಿಷಯದಲ್ಲಿ) ವೀರನ; ವೀರನಿಗೆ ತಕ್ಕ; ವೀರೋಚಿತ; ಸಾಹಸದ: heroic death ವೀರಮರಣ.
  2. (ವಕ್ತಿಯ ವಿಷಯದಲ್ಲಿ) ವೀರನಂಥ; ವೀರ – ಲಕ್ಷಣಗಳುಳ್ಳ, ಗುಣಗಳುಳ್ಳ: the heroic ruler of the stamp of Cromwell ಕ್ರಾಮ್‍ವೆಲ್ಲಿನಂಥ ವೀರರಾಜ.
  3. (ಭಾಷೆಯ ವಿಷಯದಲ್ಲಿ) ಉದಾತ್ತ; ಉನ್ನತ; ಭವ್ಯ; ವೈಭವದ: praises in heroic style ಉದಾತ್ತ ಶೈಲಿಯಲ್ಲಿರುವ ಪ್ರಶಂಸೆಗಳು.
  4. (ಕಲಾತಿಯ ವಿಷಯದಲ್ಲಿ) (ಅಳತೆ, ಪ್ರಮಾಣ ಯಾ ವಸ್ತುವಿನಲ್ಲಿ) ಭಾರಿ; ಭವ್ಯ.
  5. (ಕಾವ್ಯದ ವಿಷಯದಲ್ಲಿ) ವೀರ; ಪ್ರಾಚೀನ ವೀರರನ್ನು ಕುರಿತ.
  6. ಧೀರ; ಸಾಹಸದ; ಸಾಹಸ ಪ್ರಯತ್ನದ: heroic attempt to solve those difficulties ಆ ಕಷ್ಟಗಳನ್ನು ಪರಿಹರಿಸುವ ಧೀರ ಪ್ರಯತ್ನ.
ಪದಗುಚ್ಛ

the heroic age ವೀರಯುಗ:

  1. ಮಾನವನ ಐದು ಯುಗಗಳಲ್ಲಿ, ಪ್ರಾಚೀನ ಗ್ರೀಕ್‍ ಕವಿ ಹಿಸಿಯಡನ ಪ್ರಕಾರ, ದೇವತೆಗಳೂ, ದೇವಾಂಶ ಪುರುಷರೂ ವೀರಸಾಹಸಗಳನ್ನೂ, ಮಹಾಸಾಹಸಗಳನ್ನೂ ಮಾಡಿದ ಯುಗ.
  2. (ಗ್ರೀಸಿನ ವಿಷಯದಲ್ಲಿ) ಗ್ರೀಕರು ಟ್ರಾಯ್‍ನಿಂದ ಹಿಂದಿರುಗುವುದಕ್ಕೆ ಮೊದಲಿನ, ಅವರ ಪುರಾಣಗಳ ವೀರಪುರುಷರು ಜೀವಿಸಿದ್ದ ಕಾಲ.
  3. ಯಾವುದೇ ದೇಶದ ಪ್ರಾಚೀನ ವೀರಪುರುಷರು ಇದ್ದ ಕಾಲ, ಅವಧಿ.