See also 2helm  3helm
1helm ಹೆಲ್ಮ್‍
ನಾಮವಾಚಕ
  1. ಚುಕ್ಕಾಣಿ – ಚಕ್ರ, ಸನ್ನೆ, ಹಿಡಿ; ಹಡಗಿನ ಕರ್ಣವನ್ನು (rudder) ತಕ್ಕಂತೆ ತಿರುಗಿಸಲಾಗುವ ಚಕ್ರ.
  2. ಚುಕ್ಕಾಣಿಯ ತಿರುಗು ದೂರ; ಚುಕ್ಕಾಣಿಚಕ್ರ ತಿರುಗಿಸಿದ ಕೋನದೂರ:more helm needed ಚುಕ್ಕಾಣಿಯನ್ನು ಇನ್ನಷ್ಟು ತಿರುಗಿಸಬೇಕು.
  3. (ರೂಪಕವಾಗಿ) ಆಡಳಿತ; ಅಧಿಕಾರ ಸೂತ್ರ; ಮಾರ್ಗದರ್ಶನ; ನೇತೃತ್ವ; ನಿರ್ವಹಣ: take the helm ಆಡಳಿತ ಸೂತ್ರ ಹಿಡಿ; ಅಧಿಕಾರ ವಹಿಸಿಕೊ.
ಪದಗುಚ್ಛ
  1. at the helm:
    1. ವಶದಲ್ಲಿ; ನಿಯಂತ್ರಣದಲ್ಲಿ; ಹತೋಟಿಯಲ್ಲಿ.
    2. (ಸಂಸ್ಥೆ ಮೊದಲಾದವುಗಳ) ಅಧಿಪತಿಯಾಗಿ; ನಾಯಕನಾಗಿ.
  2. down (with the) helm ಅಲಗುಗಳಿಗೆ ಎದುರಾಗುವಂತೆ ಚುಕ್ಕಾಣಿ ತಿರುಗಿಸು.
  3. lee helm ಗಾಳಿಮರೆಯ ಚುಕ್ಕಾಣಿ ಚಕ್ರ.
  4. up (with the) helm ಅಲಗುಗಳು ಗಾಳಿಯ ದಿಕ್ಕಿಗೇ ಇರುವಂತೆ ಚುಕ್ಕಾಣಿ ತಿರುಗಿಸು.
  5. weather helm ಗಾಳಿ ದಿಕ್ಕಿನ ಚುಕ್ಕಾಣಿ ಚಕ್ರ.